ಸ್ಪೇನ್ ಕೋಚ್ಗೆ ಟ್ವಿಟ್ಟರ್ ಮೇಲ್ಯಾಕೆ ಉರಿ
ಜೋಹಾನ್ಸ್ ಬರ್ಗ್, ಜೂ.9: ಸ್ಪೇನ್ ತಂಡ ಫೀಫಾ ವಿಶ್ವಕಪ್ ಅನ್ನು ತುಂಬಾ ಸೀರಿಯಸ್ ಆಗಿ ತೆಗೆದುಕೊಂಡಿದೆ. ಸ್ಪೇನ್ ತಂಡದ ಕೋಚ್ ವಿನ್ಸೆಂಟ್ ಡೆಲ್ ಬೊಸ್ಕ್ಯೂ ತಂಡದ ಆಟಗಾರರು ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಎಲ್ಲಾ ಸಾಮಾಜಿಕ ಜಾಲತಾಣ ಬಳಸುವುದನ್ನು ನಿಷೇಧಿಸಿದ್ದಾರೆ.
ಇದರಿಂದ ಸಹಜವಾಗಿ ಫುಟ್ಬಾಲ್ ಪ್ರೇಮಿಗಳಿಗೆ ಬೇಸರವಾಗಿದೆ. ತಮ್ಮ ನೆಚ್ಚಿನ ಆಟಗಾರರ ಟ್ವೀಟ್ ನೋಡುವ ಫಾಲೋ ಮಾಡುವ ಅವಕಾಶ ಅಭಿಮಾನಿಗಳಿಗೆ ಇಲ್ಲವಾಗಿದೆ. ಆದರೂ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ತಾರೆ ಫಾರ್ನಾಂಡೋ ಟೋರೆಸ್ ಹೇಗಾದರೂ ಮಾಡಿ ಟ್ವೀಟ್ ಮಾಡುತ್ತಾರೆ ಎಂಬ ವಿಶ್ವಾಸವಿದೆ.
ಫೀಫಾ ವಿಶ್ವಕಪ್ 2010 : ವಿಶ್ವಕಪ್ ವೇಳಾಪಟ್ಟಿ || ಯಾವ ಗುಂಪಿನಲ್ಲಿ ಯಾವ ತಂಡ || ಅಂಕಗಳ ಪಟ್ಟಿ
ಆದರೆ ಕೋಚ್ ವಿನ್ಸೆಂಟ್ ನಂತೆ ಟೋರೆಸ್ ಕೂಡಾ ವಿಶ್ವಕಪ್ ಪಂದ್ಯಾವಳಿ ವೇಳೆ ಏಕಾಗ್ರತೆ ಕಳೆದುಕೊಳ್ಳದೆ ತಂಡದ ಉನ್ನತಿ ಬಗ್ಗೆ ಮಾತ್ರ ಯೋಚಿಸ ತೊಡಗಿದ್ದಾರೆ ಎನ್ನುತ್ತದೆ ಮೂಲಗಳು.
ಫೀಫಾ ವಿಶ್ವಕಪ್ 2010 ಗೆಲ್ಲುವ ಫೇವರೀಟ್ ಎಂಬ ಹಣೆಪಟ್ಟಿ ಹೊತ್ತಿಕೊಂಡಿರುವ ಸ್ಪೇನ್ , ಎಂದಿನಂತೆ ತನ್ನ ಆಕ್ರಮಣಕಾರಿ ಆಟದ ಶೈಲಿಯನ್ನು ಮುಂದುವರೆಸುವ ಸಾಧ್ಯತೆಯಿದೆ. ಎಚ್ ಗುಂಪಿ ನಲ್ಲಿ ಅಗ್ರಸ್ಥಾನಕ್ಕೇರುವುದು ಸ್ಪೇನ್ ತಂಡದ ಮೊದಲ ಗುರಿ.
ವಿಡಿಯೋಗಳು : ಅಧಿಕೃತ ವಿಶ್ವಕಪ್ ಆಶಯ ಗೀತೆ || ಗಾಯಕಿ ಶಕೀರಾ ಗೀತೆ || ಎಕಾನ್ ಹಾಡಿದ ಆಫ್ರಿಕಾ ಗೀತೆ
ಸ್ಪೇನ್ ಗೆ ತೀವ್ರ ಸ್ಪರ್ಧೆ ಒಡ್ಡಲು ಚಿಲಿ ಕಾದಿದೆ. ಉಳಿದಂತೆ ಸ್ವಿಡ್ಜರ್ ಲ್ಯಾಂಡ್, ಹೊಂಡುರಸ್ ತಂಡಗಳು ಎಚ್ ಗುಂಪಿನಲ್ಲಿವೆ. ಸ್ಪೇನ್ ತನ್ನ ಮೊದಲ ಪಂದ್ಯವನ್ನು ಡರ್ಬನ್ ನಲ್ಲಿ ಸ್ವಿಡ್ಜರ್ ಲ್ಯಾಂಡ್ ವಿರುದ್ಧ ಜೂ. 16 ರಂದು ಆಡಲಿದೆ.












Click it and Unblock the Notifications