ಸಾನಿಯಾಗೆ ಮನೆಗೆ ಮಲ್ಲಿಗೆಯಾಗುವ ಬಯಕೆ

Sania Mirza
ಬ್ರಿಮ್ಮಿಂಗ್ ಹ್ಯಾಮ್, ಜೂ. 8 : ಮುಂದಿನ ಎರಡು ವರ್ಷದೊಳಗೆ ವೃತ್ತಿಪರ ಟೆನ್ನಿಸ್ ಕ್ರೀಡೆಗೆ ವಿದಾಯ ಹೇಳುವುದಾಗಿ ಭಾರತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹೇಳಿದ್ದಾರೆ. ಸದ್ಯ ಇಲ್ಲಿ ನಡೆಯುತ್ತಿರುವ AEGON ಕ್ಲಾಸಿಕ್ ಪಂದ್ಯಾವಳಿಯಲ್ಲಿ ಆಡುತ್ತಿರುವ ಸಾನಿಯಾ ಟೆನ್ನಿಸ್ಸಿನಿಂದ ನಿವೃತ್ತಿಹೊಂದುವ ಇಚ್ಛೆ ಪ್ರಕಟಿಸಿದ್ದಾರೆ.

ನಾನೀಗ ಕುಟುಂಬದ ಕಡೆಗೆ ಹೆಚ್ಚು ಗಮನ ಕೊಡಬೇಕಾಗಿದೆ. ಮದುವೆಯಾದ ಹೊಸದರಲ್ಲಿ ಗಂಡನಿಂದ ದೂರವಿರುವುದು ಕಷ್ಟ ಆಗತ್ತೆ. ಆದ್ದರಿಂದ ಅಬ್ಬಬ್ಬಾ ಎಂದರೆ ಇನ್ನೆರಡು ವರ್ಷ ಆಟ ಆಡಿ ರಿಟೈರ್ ಮೆಂಟ್ ಪಡಿತೀನಿ ಎಂದು ಸಾನಿಯಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿಕೊಂಡರು.

ಟೆನ್ನಿಸ್ ಆಟಕ್ಕಾಗಿ ನನ್ನ ಖಾಸಗಿ ಬದುಕನ್ನು ತ್ಯಾಗಮಾಡುವುದಕ್ಕೆ ಇಷ್ಟವಿಲ್ಲ. ಮನೆ, ಗಂಡ, ಕುಟುಂಬ ಇತ್ಯಾದಿ ಖಾಸಗಿ ಬದುಕಿನ ವಿವಿಧ ಸ್ತರಗಳನ್ನು ನಾನು ಅನುಭವಿಸಬೇಕು ಎಂದು ಸಾನಿಯಾ ಶೊಯೇಬ್ ಸ್ಪಷ್ಟಪಡಿಸಿದರು.

ಅತ್ಯಂತ ವಿವಾದಾತ್ಮಕ ಸನ್ನಿವೇಶಗಳಲ್ಲಿ ಪಾಕ್ ಕ್ರಿಕೆಟ್ಟಿಗ ಶೊಯೋಬ್ ಮಲ್ಲಿಕ್ ಅವರನ್ನು ಮದುವೆ ಆದ ನಂತರ ಸಾನಿಯಾ ಇದೇ ಪ್ರಥಮ ಬಾರಿಗೆ ಸುದ್ದಿ ಮಾಧ್ಯಮಗಳೊಂದಿಗೆ ತಮ್ಮ ವೈಯಕ್ತಿಯ ಜೀವನದ ಎರಡು ಹಾಳೆಗಳನ್ನು ತೆರೆದಿಟ್ಟರು.

ಸೋಮವಾರ ಇಲ್ಲಿ ನಡೆದ ಒಂದು ಪಂದ್ಯದಲ್ಲಿ ಸಾನಿಯಾ ಟೈವಾನಿನ ಯಂಗ್ ಜೆನ್ ಅವರನ್ನು 6-1 6-4 ಅಂತರದಿಂದ ಪರಾಭವಗೊಳಿಸಿದರು. ಪ್ರಸಕ್ತ ವರ್ಷದಲ್ಲಿ ಸಾನಿಯಾಗೆ ಲಭಿಸುತ್ತಿರುವ ಎರಡನೇ ಗೆಲವು ಇದಾಗಿದೆ. ಇತ್ತೀಚಿನ ದಿನಗಳಲ್ಲಿ ಮಣಿಕಟ್ಟಿನ ನೋವಿನಿಂದ ಬಳಲುತ್ತಿರುವ ಸಾನಿಯಾ 'ಇನ್ನು ಆಡಲು ಕಷ್ಟ'ಎಂದು ಒಮ್ಮೆ ಹೇಳಿದ್ದರು. ಆದರೆ, ಮಣಿಕಟ್ಟಿನ ನೋವು ಕಡಿಮೆಯಾಗಿದ್ದು ಈಗ ಮತ್ತೆ ಆಟದ ಮೈದಾನಕ್ಕೆ ಬಂದಿದ್ದಾರೆ.

ಬರಲಿರುವ ಕಾಮನ್ ವೆಲ್ತ್ ಹಾಗೂ ಏಷಿಯನ್ ಕ್ರೀಡಾಕೂಟದಲ್ಲಿ ಭಾರತದ ಪರವಾಗಿ ಆಡಲು ದೈಹಿಕವಾಗಿ ಸಂಪೂರ್ಣ ಆರೋಗ್ಯದಿಂದಿರುವ ಆಶಾಭಾವನೆಯನ್ನು ಸಾನಿಯಾ ಇಟ್ಟುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+