ತಿರುಪತಿಯಲ್ಲಿ ಕುಡಿಯುವ ನೀರಿನ ಬಾಟಲಿ ನಿಷೇಧ
ತಿರುಪತಿ,
ಜೂ.5: ತಿರುಮಲ ತಿರುಪತಿಯಲ್ಲಿ ಇಂದಿನಿಂದ ಕುಡಿಯುವ ನೀರಿನ ಬಾಟಲಿಗಳನ್ನು ನಿಷೇಧಿಸಲಾಗಿದೆ. ದ್ರವರೂಪದ ಬಾಂಬ್ ರೂಪದಲ್ಲಿ ತಿರುಮಲ ತಿರುಪತಿಯಲ್ಲಿ ದಾಳಿ ಮಾಡುವ ಸಾಧ್ಯತೆಗಳಿವೆ ಎಂದು ಗುಪ್ತಚರ ಇಲಾಖೆ ಎಚ್ಚರಿಸಿರುವ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. id="toptextpromo">ತಿರುಮಲ
ತಿರುಪತಿ ಆಲಯದಲ್ಲಿ ಪೊಲೀಸ್ ಬಿಗಿ ಭದ್ರತೆಯಿದೆ. ಆದರೂ ಡಿಟೆಕ್ಟರ್ ಗಳಿಗೆ ದ್ರಮರೂಪದಲ್ಲಿನ ಸ್ಫೋಟಕಗಳನ್ನು ಗುರಿತಿಸುವ ಸಾಮರ್ಥ್ಯವಿಲ್ಲದ ಕಾರಣ ಈ ಕ್ರಮ ಅನಿವಾರ್ಯವಾಗಿದೆ. ಆಲಯಕ್ಕೆ ಬರುವ ಭಕ್ತರಿಗೆ ಇನ್ನು ಮುಂದೆ ಕುಡಿಯುವ ನೀರಿನ ವ್ಯವಸ್ಥೆಯನ್ನು ದೇವಸ್ಥಾನದ ಸಿಬ್ಬಂದಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. id='are-slot-1' class='oiad oi-axt oiadv'> id='top-searched-articles'>ವೆಂಕಟೇಶ್ವರನ
ದರ್ಶನಕ್ಕೆ ಬರುವ ಭಕ್ತಾದಿಗಳು ಇನ್ನು ಮುಂದೆ ಬರ್ಮುಡಾ, ಚಡ್ಡಿ ಮತ್ತು ಟೀ ಶರ್ಟ್ ಗಳನ್ನು ಧರಿಸುವಂತಿಲ್ಲ. ಸಭ್ಯ ಉಡುಪುಗಳನ್ನ್ನು ಧರಿಸಿ ಮಾತ್ರ ತಿಮ್ಮಪ್ಪನ ದರ್ಶನ ಪಡೆಯಬೇಕಾಗುತ್ತದೆ. ಈ ಮೂಲಕ ತಿರುಮಲ ತಿರುಪತಿ ಆಲಯ ಮಂಡಳಿ ಈ ನಿರ್ಣಯ ತೆಗೆದುಕೊಂಡಿದೆ.











Click it and Unblock the Notifications