ಮಂತ್ರಾಲಯ ಶ್ರೀಗಳ ಕಾರು ಅಪಘಾತ; ಶ್ರೀಗಳು ಪಾರು
ರಾಯಚೂರು,
ಜೂ.4: ಮಂತ್ರಾಲಯದ ಶ್ರೀ ರಾಘವೇಂದ್ರ ಮಠದ ಪೀಠಾಧಿಪತಿ ಸುಯತೀಂದ್ರ ತೀರ್ಥರು ಪ್ರಯಾಣಿಸಿದ್ದ ಕಾರು ಅಪಘಾತಕ್ಕೀಡಾಗಿದ್ದು ಶ್ರೀಗಳು ಅಪಾಯದಿಂದ ಪಾರಾಗಿದ್ದಾರೆ. ಆಂಧ್ರದ ಗದ್ವಾಲ್ ನಿಂದ ಹೈದರಾಬಾದ್ ತೆರಳುತ್ತಿದ್ದಾಗ ರಸ್ತೆ ಬದಿಯ ಕಲ್ಲಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ. id="toptextpromo">ಶ್ರೀಗಳೊಂದಿಗೆ
ಕಾರಿನಲ್ಲಿ ಮಠದ ಸಿಬ್ಬಂದಿಯೂ ಇದ್ದರು. ಭುವನೇಂದ್ರ ತೀರ್ಥರ ಆರಾಧನೆಯನ್ನು ರಾಜುಹಳ್ಳಿಯಲ್ಲಿ ಮುಗಿಸಿಕೊಂಡು ಗದ್ವಾಲ್ ಮಾರ್ಗವಾಗಿ ಅವರು ಹೈದರಾಬಾದ್ ಗೆ ತೆರಳುತ್ತಿದ್ದರು. ರಸ್ತೆ ಇಕ್ಕಟ್ಟಾಗಿದ್ದು ಎದುರಿಗೆ ಬಂದ ವಾಹನದ ಹೆಡ್ ಲೈಟ್ ತೀಕ್ಷ್ಣ ವಾಗಿದ್ದ ಕಾರಣ ಶ್ರೀಗಳ ಇನ್ನೋವಾ ಕಾರಿನ ಚಾಲಕ ನಿಯಂತ್ರಣ ಎಡಬದಿಯಲ್ಲಿದ್ದ ಕಲ್ಲಿಗೆ ಡಿಕ್ಕ್ಕಿ ಹೊಡೆದಿದ್ದಾನೆ. ಇದರಿಂದ ಕಾರು ಪಲ್ಟಿ ಹೊಡೆದಿತ್ತು. id='are-slot-1' class='oiad oi-axt oiadv'> id='top-searched-articles'>ಸ್ವಾಮೀಜಿಗಳಿಗೆ
ಯಾವುದೇ ಸಣ್ಣ ಪುಟ್ಟ ಗಾಯಗಳು ಆಗದೆ ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಶ್ರೀಗಳೊಂದಿಗೆ ಇದ್ದ ಪುರಾತನ ಮೂಲ ರಾಮದೇವರ ವಿಗ್ರಹಕ್ಕೂ ಯಾವುದೇ ಹಾನಿಯಾಗಿಲ್ಲ ಎಂದು ಮೂಲಗಳು ತಿಳಿಸಿವೆ. ಬೇರೊಂದು ವಾಹನದ ಮೂಲಕ ಶ್ರೀಗಳು ಹೈದರಾಬಾದ್ ತಲುಪಿದ್ದಾರೆ.ರಾಘವೇಂದ್ರ ಸ್ವಾಮಿಗಳ ಆಶೀರ್ವಾದದಿಂದ ನಮಗಾಗಲಿ ನಮ್ಮ ಸಿಬ್ಬಂದಿಗಾಗಲಿ ಯಾವುದೇ ಅಪಾಯವಾಗಿಲ್ಲ. ಭಕ್ತರು ಆತಂಕಪಡಬೇಕಾಗಿಲ್ಲ ಎಂದು ಸ್ವಾಮೀಜಿಗಳು ಪ್ರತಿಕ್ರಿಯಿಸಿದ್ದಾರೆ.











Click it and Unblock the Notifications