ಭೂಮಿ ನೀಡಿದ ರೈತರಿಗೆ ಜನಾರ್ದನ ರೆಡ್ಡಿ ಚೆಕ್ ವಿತರಣೆ

ಸಿರುವಾರ - ಚಾಗನೂರು ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ವಿಮಾನ ನಿಲ್ದಾಣಕ್ಕಾಗಿ ವಶಪಡಿಸಿಕೊಂಡಿರುವ ಜಮೀನಿಗೆ ಪ್ರತಿಯಾಗಿ ರೈತರಿಗೆ ಗೃಹ ಕಚೇರಿ ಕುಟೀರ'ದಲ್ಲಿ ಶನಿವಾರ ಬೆಳಿಗ್ಗೆ ಚೆಕ್ ವಿತರಿಸಿದ ನಂತರ ಅವರು ಪತ್ರಕರ್ತರೊಡನೆ ಮಾತನಾಡುತ್ತಿದ್ದರು.
ಒಟ್ಟು 900 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳಲಾಗಿದ್ದು ರೈತರಿಗೆ 109 ಕೋಟಿ ರು. ಪರಿಹಾರ ನೀಡಲಾಗುತ್ತಿದೆ ಎಂದು ಗೃಹ ಕಚೇರಿ ಕುಟೀರ'ದಲ್ಲಿ ಶನಿವಾರ ಬೆಳಗ್ಗೆ ಜನಾರ್ದನರೆಡ್ಡಿ ಅವರು ತಿಳಿಸಿದರು. ಈಗಾಗಲೆ ರೈತರಿಗೆ 25 ಕೋಟಿ ರು. ನೀಡಲಾಗಿದ್ದು, ಈಗ 20 ಕೋಟಿ ರು. ಚೆಕ್ ಮೂಲಕ ಸಂತ್ರಸ್ತರಿಗೆ ನೀಡಲಾಗಿದೆ. ಒಟ್ಟು 109 ಕೋಟಿ ರು.ಗಳನ್ನು ಪರಿಹಾರವಾಗಿ ರೈತರಿಗೆ ವಿತರಣೆ ಮಾಡಲಾಗುತ್ತಿದೆ ಎಂದು ರೆಡ್ಡಿ ಹೇಳಿದರು.
ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಟೆಂಡರ್ ಆಹ್ವಾನಿಸಿ ಮಾರ್ಗ್' ನಿರ್ಮಾಣ ಸಂಸ್ಥೆಗೆ ನೀಡಲಾಗಿದೆ. ಕಾಮಗಾರಿ ಶೀಘ್ರದಲ್ಲೇ ಪ್ರಾರಂಭ ಆಗಲಿದೆ. ಭೂಮಿಯನ್ನು ಕಳೆದುಕೊಂಡ ರೈತರೇ ಈ ಯೋಜನೆಗೆ ಭೂಮಿ ಪೂಜೆ ಮಾಡಲಿದ್ದಾರೆ ಎಂದು ಅವರು ನುಡಿದರು. ಈ ಸಂದರ್ಭದಲ್ಲಿ ರಾಜ್ಯ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಜರಿದ್ದರು.












Click it and Unblock the Notifications