ಹಮ್ಮಯ್ಯ ಕಡೆಗೂ ಬೋನಿಗೆ ಬಿತ್ತು ಹೆಣ್ಣು ಹುಲಿ
ಮಡಿಕೇರಿ,
ಜೂ.4: ಹಲವಾರು ಜಾನುವಾರುಗಳ ಸಾವಿಗೆ ಕಾರಣವಾಗಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ್ದ ಹೆಣ್ಣು ಹುಲಿಯೊಂದು ಗುರುವಾರ ಬಲೆಗೆ ಬಿದ್ದ ಘಟನೆ ದಕ್ಷಿಣ ಕೊಡಗಿನಲ್ಲಿ ನಡೆದಿದೆ. ಬಳಿಕ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ರವಾನಿಸಲಾಯಿತು. id="toptextpromo">ಹನ್ನೆರಡು
ವರ್ಷ ವಯಸ್ಸಿನ ಈ ಹೆಣ್ಣು ಹುಲಿ ಇತ್ತೀಚೆಗೆ ಹಸುವೊಂದರ ಮೇಲೆ ಎರಗಿ ಜೀವ ತೆಗೆದಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಸತ್ತ ಹಸುವಿನ ಅವಯವಗಳನ್ನು ಬೋನೊಂದರಲ್ಲಿ ಇಟ್ಟು ಹುಲಿಯನ್ನು ಬಲೆಗೆ ಕೆಡವಿದ್ದಾರೆ. ಅರಣ್ಯ ಇಲಾಖೆಯ ನೆರವಿಗೆ ಗ್ರಾಮಸ್ಥರು ಸಹ ಕೈಜೋಡಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಸತತ
ಎರಡು ದಿನಗಳು ಕಾದ ಬಳಿಕ ಹುಲಿ ಬೋನಿಗೆ ಬಿದ್ದಿತ್ತು. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದಾಗ ಹುಲಿ ಗಾಯಗೊಂಡಿತ್ತ್ತು. ಹುಲಿಯ ಪಂಜ ಮತ್ತು ಅದರ ಹಲ್ಲುಗಳಿಗೆ ಹಾನಿಯಾಗಿತ್ತು. ಬೋನಿನಿಂದ ಹೊರಬೀಳಲು ಹುಲಿ ಹೋರಾಡಿ ಗಾಯಗೊಂಡಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications