ಉದ್ಯಮಿಗಳೇ ನಿಮಗೆ ಸ್ವಾಗತ : ವಿಜಯ್ ಮಲ್ಯ

ಬೆಂಗಳೂರಿನಲ್ಲಿ ಜ್ಞಾನ ಸಂಸ್ಕೃತಿ ಇದೆ. ಇಸ್ರೋ, ಎಚ್ ಎ ಎಲ್ ಮುಂತಾದ ಸಂಸ್ಥೆಗಳಿವೆ. ಐಟಿ ರಾಜಧಾನಿ, ನಾಲೆಡ್ಜ್ ಸಿಟಿ ಎನಿಸಿಕೊಂಡ ಮೇಲೆ ಉದ್ಯಮಿಗಳ ಸ್ವರ್ಗವಾಗಿ ಬೆಂಗಳೂರು ರೂಪುಗೊಳ್ಳಲಿದೆ. ಅಬಕಾರಿ, ವಿಮಾನಯಾನಕ್ಕೆ ಹೇಳಿ ಮಾಡಿಸಿದ ಜಾಗ ಇದು.
ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆಗೆ ಅವಕಾಶವಿದೆ. ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಿದೆ.ಇಂತಹ ಬೃಹತ್ ಸಮಾವೇಶ ಆಯೋಜಿಸಿದ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅವರ ಸರ್ಕಾರಕ್ಕೆ ನಿಜಕ್ಕೂ ಅಭಿನಂದನಾರ್ಹರು ಎಂದು ಯುಬಿ ಗ್ರೂಪ್ ಹಾಗೂ ಕಿಂಗ್ ಫಿಷರ್ ಮಾಲೀಕ ವಿಜಯ್ ಮಲ್ಯ ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ವಿಪ್ರೋ ಅಧ್ಯಕ್ಷ ಅಜೀಂ ಪ್ರೇಮ್ ಜಿ, ಕರ್ನಾಟಕ ರಾಜ್ಯ ಉತ್ಪಾದನಾ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಬೇಕು. ತಮಿಳುನಾಡಿನ ಮಾದರಿಯಲ್ಲಿ ಉತ್ಪದನಾ ಕ್ಷೇತ್ರಕ್ಕೆ ಹೆಚ್ಚಿನ ಬಂಡವಾಳ ಹೂಡುವಂತೆ ಮಾಡುವ ಅವಶ್ಯಕತೆ. ಐಟಿ ಕ್ಷೇತ್ರ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದು ಅಭಿಪ್ರಾಯಪಟ್ಟರು.












Click it and Unblock the Notifications