ತಿರುಪತಿ ತಿಮ್ಮಪ್ಪನಿಗೆ ಅಡ್ಡಬಿದ್ದ ಚಿದಂಬರಂ

ಗುರುವಾರ ಮುಂಜಾನೆ ತಿರುಪತಿ ತಿಮ್ಮಪ್ಪನ ಆಲಯದ ಗರ್ಭಗುಡಿಯಲ್ಲಿ ನಡೆದ ವೆಂಕಟೇಶ್ವರ ಸುಪ್ರಭಾತ ಕಾರ್ಯಕ್ರಮದಲ್ಲಿ ಚಿದಂಬರಂ ಭಾಗವಹಿಸಿದ್ದರು. ಒಂದು ಗಂಟೆಗೂ ಹೆಚ್ಚು ಕಾಲ ಅವರು ದೇವಸ್ಥಾನದಲ್ಲಿ ಕಳೆದದ್ದು ವಿಶೇಷ ಎಂದು ತಿರುಮಲ ತಿರುಪತಿ ದೇವಸ್ಥಾನ ಮೂಲಗಳು ತಿಳಿಸಿವೆ.
ಸುಪ್ರಭಾತದ ಬಳಿಕ ಅವರು ಸಪ್ತಗಿರಿವಾಸನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದರು.ಚಿದಂಬರಂ ಆಲಯದ ಶ್ರೀ ರಂಗ ಮಂಟಪದಲ್ಲಿ ಪುರೋಹಿತರ ಆಶೀರ್ವಚನ ಪಡೆದರು. ತಿರುಮಲ ತಿರುಪತಿ ಆಲಯದ ಅಧ್ಯಕ್ಷರು ಚಿದಂಬರಂ ಅವರಿಗೆ ರೇಷ್ಮೆ ವಸ್ತ್ರ, ಪ್ರಸಾದ ಮತ್ತು ಪವಿತ್ರ ಅಭಿಷೇಕದ ತೀರ್ಥವನ್ನು ಸಮರ್ಪಿಸಿದರು.
ಪೂಜಾ ಕಾರ್ಯ ಮುಗಿದ ಬಳಿಕ ತಿರುಪತಿ ವಿಮಾನ ನಿಲ್ದಾಣದಿಂದ ಚಿದಂಬರಂ ನವದೆಹಲಿಗೆ ಪ್ರಯಾಣ ಬೆಳೆಸಿದರು. ಕೇಂದ್ರ ಗೃಹ ಸಚಿವರಾದ ಬಳಿಕ ಚಿದಂಬರಂ ತಿರುಪತಿ ಆಲಯಕ್ಕೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಕೇಂದ್ರ ಹಣಕಾಸು ಸಚಿವರಾಗಿದ್ದಾಗ 2004ರಲ್ಲಿ ಒಮ್ಮೆ ತಿರುಪತಿಗೆ ಭೇಟಿ ನೀಡಿದ್ದರು.












Click it and Unblock the Notifications