ರಹಸ್ಯ ಸ್ಥಳದಲ್ಲಿ ನಕ್ಸಲ್ ನಂದ ವಿಚಾರಣೆ
ಶಿವಮೊಗ್ಗ,
ಜೂ.1: ಕಳೆದ ಎರಡು ದಶಕಗಳಿಂದ ಪೊಲೀಸರಿಗೆ ಕಣ್ತಪ್ಪಿಸಿ ತಲೆಮರೆಸಿಕೊಂಡಿದ್ದ ಶಂಕಿತ ನಕ್ಸಲ್ ಮುಖಂಡ ನಂದಕುಮಾರ್ ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿ, ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದಾರೆ. ನಕ್ಸಲ್ ನಂದನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದೆ. id="toptextpromo">ಸುಮಾರು
20 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ನಂದ, ಪೊಲೀಸರ ಕೈಗೆ ಸಿಕ್ಕಿರಲಿಲ್ಲ. ನಕ್ಸಲ್ ನಂದ ಕುಮಾರ್ ತಲೆಗೆ ಒಂದು ಲಕ್ಷರು ಇನಾಮು ನೀಡುವುದಾಗಿ ಪೊಲೀಸರು ಘೋಷಿಸಿದ್ದರು.ಶಿವಮೊಗ್ಗ, ರಾಯಚೂರು ಜಿಲ್ಲೆ ಇವನ ಕಾರ್ಯ ಕ್ಷೇತ್ರ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'> ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ನಂದ ಕುಮಾರ್ ಬಿ.ಕಾಂ ಪದವೀಧರನಾಗಿದ್ದು, ಶಿವಮೊಗ್ಗ ಮೂಲದ ಶಿವಮ್ಮ ಎಂಬುವವರನ್ನು ಮದುವೆಯಾಗಿದ್ದನು. ಸಿದ್ದನಗೌಡ ಶೂಟೌಟ್ ಪ್ರಕರಣ, ಸಾರ್ವಜನಿಕ ಗಲಭೆ ಮುಂತಾದ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.











Click it and Unblock the Notifications