ಜಾರ್ಖಂಡ್ ನಲ್ಲಿ ದೇಶದ ಪ್ರಥಮ ಪ್ರಜೆ ಆಳ್ವಿಕೆ

ಮೇ. 24 ರಂದು ಜೆಎಂಎಂ ನೇತೃತ್ವದ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಬಿಜೆಪಿ ವಾಪಾಸ್ ಪಡೆದ ಹಿನ್ನೆಲೆಯಲ್ಲಿ ಅತಂತ್ರ ರಾಜಕೀಯ ಸ್ಥಿತಿ ಉಂಟಾಗಿತ್ತು. ನಂತರ ರಾಜ್ಯಪಾಲ ಫಾರೂಕ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡಲು ಅಡ್ಡಿಯಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಸೂಚಿಸಿದ್ದರು.
ಇಂದು ಮಂಗಳವಾರ ಬೆಳಗ್ಗೆ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರದ ಕ್ಯಾಬಿನೆಟ್ ಚರ್ಚೆ ನಡೆಸಿ ರಾಷ್ಟ್ರಪತಿ ಆಡಳಿತ ಹೇರಲು ಅನುಮೋದನೆ ನೀಡಿತು. ಭಾನುವಾರ ರಾತ್ರಿ ಜೆಎಂಎಂ ನಾಯಕ ಶಿಬು ಸೊರೆನ್ ನೀಡಿದ ಮೇಲೆ ಬಿಜೆಪಿ, ಜಾರ್ಖಂಡ್ ವಿಕಾಸ್ ಮೋರ್ಚಾ-ಪ್ರಜಾತಾಂತ್ರಿಕ್(ಜೆವಿಎಂ-ಪಿ)ಗೆ ಪರ್ಯಾಯ ಸರ್ಕಾರ ರಚಿಸುವ ಅವಕಾವಿತ್ತು.
ಮೂರು ಪ್ರಮುಖ ಪಕ್ಷಗಳಲ್ಲಿ ಸರ್ಕಾರ ರಚನೆ ಬೇಕಾದ ಬಹುಮತ ಬೆಂಬಲದ ಕೊರತೆಯಿದ್ದ ಹಿನ್ನೆಲೆಯಲ್ಲಿ ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಸೂಚಿಸಿದ್ದರು.











Click it and Unblock the Notifications