ರವಿಶಂಕರ್ ಗುರೂಜಿ ಹತ್ಯೆಗೆ ಯತ್ನ

4 ಗಂಟೆ ಯಿಂದ 6 ಗಂಟೆವರೆಗೂ ಮೊದಲ ಸತ್ಸಂಗ ಕಾರ್ಯಕ್ರಮವಿತ್ತು. 8 ಗಂಟೆಗೆ ಇದ್ದ ಇನ್ನೊಂದು ಸತ್ಸಂಗ ಕಾರ್ಯಕ್ರಮದಲ್ಲಿ ಸ್ವತಃ ಗುರೂಜಿ ಅವರೇ ಗುಂಡಿನ ದಾಳಿಯ ಬಗ್ಗೆ ಎಲ್ಲರಿಗೂ ತಿಳಿಸಿದ್ದಾರೆ, ನಾನು ಸುರಕ್ಷಿತವಾಗಿದ್ದೇನೆ. ಘಟನೆ ನಡೆದ ನಂತರವೂ ಸತ್ಸಂಗ ನಡೆಸಲಾಯಿತು. ಭಕ್ತರು ಆತಂಕಪಡಬೇಕಾಗಿಲ್ಲ ಎಂದು ರವಿಶಂಕರ್ ಗುರೂಜಿ ಹೇಳಿದ್ದಾರೆ. ಸದ್ಯ ರವಿಶಂಕರ್ ಗುರೂಜಿ ಆಶ್ರಮದ ಕುಟೀರದಲ್ಲೇ ಸುರಕ್ಷಿತವಾಗಿ ನೆಲೆಸಿದ್ದಾರೆ.
ವಿಡಿಯೋ: ಇಂಥ ದಾಳಿಗಳಿಗೆ ಅಂಜುವವನು ನಾನಲ್ಲ:ಶ್ರೀಶ್ರೀ
ವಿಡಿಯೋ: ಗುಂಡು ಹಾರಿಸಿದವನನ್ನು ನಾನು ಕ್ಷಮಿಸಿದ್ದೇನೆ: ಶ್ರೀಶ್ರೀ
ದುಷ್ಕರ್ಮಿಯು 30-45 ಅಡಿ ದೂರದಿಂದ ಪಾಯಿಂಟ್ 22 ನಿಂದ ರೈಫಲ್ ನಿಂದ ಗುರೂಜಿಗೆ ಗುರಿಯಿಟ್ಟು ಹಾರಿಸಿದ ಗುಂಡು, ಗುರೂಜಿಯ ಬದಲಿಗೆ ಭಕ್ತನೊಬ್ಬನ ತೊಡೆಯನ್ನು ಘಾಸಿಗೊಳಿಸಿದೆ. ಗಾಯಗೊಂಡ ಭಕ್ತನನ್ನು ವಿನಯ್ ಎಂದು ಗುರುತಿಸಲಾಗಿದೆ. ಗಾಯಾಳು ವಿನಯ್ ಗೆ ಚಿಕಿತ್ಸೆ ನೀಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ತಲಘಟ್ಟಪುರ ಠಾಣೆ ಪೊಲೀಸರು ಆಗಮಿಸಿ, ದುಷ್ಕರ್ಮಿಯ ಸುಳಿವಿಗಾಗಿ ತೀವ್ರ ಶೋಧ ನಡೆಸಿದ್ದಾರೆ. ಕೇಂದ್ರ ವಲಯ ಐಜಿಪಿ ಕಮಲ್ ಪಂಥ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪ್ರವಚನ ಆದ ಮೇಲೆ ಗುಂಡಿನ ದಾಳಿ ನಡೆದ ಬಗ್ಗೆ ಮಾಹಿತಿ ಬಂದಿದೆ. ಗುರೂಜಿ ಅವರು ಸೇಫ್ ಎಂದು ತಿಳಿದು ಬಂದಿದೆ. ನಾಳೆ ಬೆಳಗ್ಗೆ ಸಂಪೂರ್ಣ ಮಾಹಿತಿ ಸಿಗಲಿದೆ. ನನಗೆ ಘಟನೆ ಬಗ್ಗೆ ಸುಮಾರು 10.30 ಕ್ಕೆ ತಿಳಿಯಿತು ಎಂದು ರಾಜ್ಯ ಗೃಹ ಸಚಿವ ವಿಎಸ್ ಆಚಾರ್ಯ ಹೇಳಿದರು. ನಾಳೆ ಮಧ್ಯಾಹ್ನ ಈ ಘಟನೆ ಬಗ್ಗೆ ಸ್ವತಃ ರವಿಶಂಕರ್ ಗುರೂಜಿ ಅವರು ಸುದ್ದಿಗಾರರಿಗೆ ಮಾಹಿತಿ ನೀಡಲಿದ್ದಾರೆ ಎಂದು ಆಶ್ರಮದ ವಕ್ತಾರ ಲಾಂಬಾ ಅವರು ಹೇಳಿದ್ದಾರೆ.












Click it and Unblock the Notifications