ಲಂಡನ್ನಿನ ಲ್ಯಾಂಬೆತ್ ಮೇಯರ್ ಕನ್ನಡಿಗ ನೀರಜ್

ಲೇಬರ್ ಪಕ್ಷದಿಂದ ಸ್ಪರ್ಧಿಸಿದ್ದ ನೀರಜ್ ಪಾಟೀಲ್ ಅವರು ಕೌನ್ಸಿಲರ್ ಆಗಿ ಎರಡನೇ ಬಾರಿ ಆಯ್ಕೆಯಾಗಿದ್ದರು. ಪುರಸಭೆಯಲ್ಲಿ ಪಾಟೀಲ್ ಅವರು ಮಹಾಪೌರರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಗುಲಬರ್ಗ ಜಿಲ್ಲೆಯ ಕಮಲಾಪುರದ ಡಾ. ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ 'ಜನಾಂಗೀಯ ಅಲ್ಪಸಂಖ್ಯಾತ ಕಾರ್ಯಪಡೆ'ಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಗುಲಬರ್ಗ ಜಿಲ್ಲೆಯ ಮಹದೇವಪ್ಪ ರಾಮಪುರ ವೈದ್ಯ ಕಾಲೇಜಿನಲ್ಲಿ ಪದವಿ ಪಡೆದ ಅವರು, 1994ರಲ್ಲಿ ಬ್ರಿಟನ್ನಿಗೆ ತೆರಳಿದ್ದರು. ನೀರಜ್ ಅವರ ತಾಯಿ ಕೂಡ ವೈದ್ಯೆಯಾಗಿದ್ದಾರೆ.
ಕನ್ನಡಿಗನೋರ್ವ ಆಂಗ್ಲ ನಾಡಿನಲ್ಲಿ ಮೇಯರ್ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಕನ್ನಡ ಬಳಗ ಯುಕೆ ತಜ್ಞ ವೈದ್ಯರಾಗಿರುವ ಡಾ.ನೀರಜ್ ಪಾಟೀಲ್ ಅವರನ್ನು ಅಭಿನಂದಿಸಿದೆ. ಪುರಸಭಾಧ್ಯಕ್ಷರಾಗಿ ಅವರ ಕಾರ್ಯವೆಲ್ಲವೂ ಜಯಪ್ರದವಾಗಲೆಂದು ಕನ್ನಡ ಬಳಗ ಹಾರೈಸಿದೆ. ನೀರಜ್ ಅವರು ಕನ್ನಡ ಬಳಗ ಯುಕೆಯ ಆಜೀವ ಸದಸ್ಯರೂ ಆಗಿದ್ದಾರೆ.












Click it and Unblock the Notifications