ಗೂಡ್ಸ್ ರೈಲಿಗೆ ಎಕ್ಸ್ ಪ್ರೆಸ್ ರೈಲು ಡಿಕ್ಕಿ : 65 ಸಾವು

ಮುಂಬೈನಿಂದ ಹೊರಟಿದ್ದ ಹೌರಾ-ಕುರ್ಲಾ ಲೋಕಮಾನ್ಯ ತಿಲಕ್ ಜ್ಞಾನೇಶ್ವರ ಸೂಪರ್ ಡಿಲೆಕ್ಸ್ ಎಕ್ಸ್ ಪ್ರೆಸ್ ರೈಲು ಹಳಿ ತಪ್ಪಿದ ರೈಲಾಗಿದೆ. ರೈಲಿನ 13 ಬೋಗಿಗಳು ಹಳಿ ತಪ್ಪಿದ್ದು, 65 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. 200ಕ್ಕೂ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಿಡ್ನಾಪೂರ, ಖರಗ್ ಪೂರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ನಸುಕಿನ ಜಾವ ಅಂದರೆ 1.20ರ ಸುಮಾರಿಗೆ ಘಟನೆ ಸಂಭವಿಸಿದೆ.
ಘಟನೆಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ, ಮಾವೋವಾದಿಗಳು ರೈಲು ಹಳಿ ಸ್ಫೋಟಗೊಳಿಸಿದ್ದರಿಂದ ಎಕ್ಸ್ ಪ್ರೆಸ್ ರೈಲು ಗೂಡ್ಸ್ ಹಳಿಗೆ ಡಿಕ್ಕಿ ಹೊಡದಿದೆ. 13 ಬೋಗಿಗಳು ಹಳಿ ತಪ್ಪಿದ್ದರಿಂದ 65 ಮಂದಿ ಮೃತಪಟ್ಟಿದ್ದಾರೆ. 200 ಕ್ಕೂ ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಘಟನಾ ಸ್ಥಳಕ್ಕೆ ರೈಲ್ವೆ ಮಂತ್ರಿ ಮಮತಾ ಬ್ಯಾನರ್ಜಿ ದಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ.
ಸಹಾಯವಾಣಿ ಸಂಖ್ಯೆ- 0322-255751, 0322-255735.












Click it and Unblock the Notifications