ಐಐಎಂ ಪಠ್ಯದಲ್ಲಿ ಭಗವದ್ಗೀತೆ ಸೇರಿಸಿ
ನೆವಡಾ,
ಮೇ.26: ಭಗವದ್ಗೀತೆಯನ್ನು ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್(ಐಐಎಂ)ಗಳ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳ ಅಗತ್ಯ ಪಠ್ಯಗಳಲ್ಲಿ ಒಂದನ್ನಾಗಿ ಸೇರಿಸಬೇಕೆಂದು ಹಿಂದುಗಳು ಆಗ್ರಹಿಸಿದ್ದಾರೆ. ಹಿಂದು ಮುಖಂಡ ರಾಜನ್ ಝೆದ್ ನೆವಾಡಾದಲ್ಲಿ ನೀಡಿರುವ ಹೇಳಿಕೆಯೊಂದರಲ್ಲಿ ಯಾವುದೇ ಕ್ರಿಯೆಯಲ್ಲಿ ಪರಿಪೂರ್ಣತೆಯನ್ನು ಮತ್ತು ಉನ್ನತ ಮನ್ನಣೆಯನ್ನು ಸಾಧಿಸಲು ಮನಸ್ಸನ್ನು ಅಣಿಗೊಳಿಸುವ ಮಾರ್ಗವೊಂದನ್ನು ಭಗವದ್ಗೀತೆಯು ಅನಾವರಣಗೊಳಿಸಿದೆ. id="toptextpromo">ಅದು
ಪ್ರತಿಯೊಬ್ಬ ಆಡಳಿತಾಧಿಕಾರಿಯ ಹೆಮ್ಮೆಯ ಆಸ್ತಿಯಾಗಬೇಕು ಎಂದಿದ್ದಾರೆ. ಅಹ್ಮದಾಬಾದ್, ಕೊಲ್ಕತಾ, ಬೆಂಗಳೂರು, ಲಕ್ನೋ, ಇಂದೋರ್, ಕೊಯಿಕ್ಕೊಡ್ ಮತ್ತು ಶಿಲ್ಲಾಂಗ್‌ಗಳಲ್ಲಿನ ಐಐಎಂಗಳು ಭಾರತದ ಅತ್ಯುನ್ನತ ಶಿಕ್ಷಣ ಸಂಸ್ಥೆಗಳೆಂಬ ಮನ್ನಣೆಗೆ ಪಾತ್ರವಾಗಿವೆ. ಜಾರ್ಖಂಡ್, ಛತ್ತೀಸ್‌ಗಢ, ಉತ್ತರಾಖಂಡ್, ಜಮ್ಮು-ಕಾಶ್ಮೀರ, ತಮಿಳುನಾಡು ಮತ್ತು ಹರ್ಯಾಣಗಳಲ್ಲಿ ಆರು ನೂತನ ಐಐಎಂಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. id='are-slot-1' class='oiad oi-axt oiadv'> id='top-searched-articles'>ವಿಶ್ವ
ಹಿಂದುತ್ವ ಸಂಘದ ಅಧ್ಯಕ್ಷರೂ ಆಗಿರುವ ಝೆದ್, ತನ್ನತನವನ್ನು ಮರೆತು ಪಾಶ್ಚಾತ್ಯ ಜಗತ್ತನ್ನು ನಕಲು ಮಾಡುವ ಬದಲು ಭಾರತವು ವ್ಯವಸ್ಥಾಪನೆ ಮತ್ತು ಇತರ ಶಿಕ್ಷಣಕ್ಕಾಗಿ ತನ್ನದೇ ಮೂಲಗಳನ್ನು ಕಂಡುಕೊಳ್ಳಬೇಕು. ಪ್ರಾಚೀನ ಹಿಂದು ಧರ್ಮಗ್ರಂಥ ಮಹಾಭಾರತವೂ ವ್ಯೂಹಾತ್ಮಕ ವ್ಯವಸ್ಥಾಪನೆ ಕುರಿತಂತೆ ಮಾರ್ಗದರ್ಶನ ನೀಡಬಲ್ಲ ಸಮಗ್ರ ಹೊತ್ತಿಗೆಯಾಗಿದೆ. ಪಂಚತಂತ್ರವೂ ತನ್ನ ನೀತಿಕಥೆಗಳ ಮೂಲಕ ಪರಿಣಾಮಕಾರಿ ನಾಯಕತ್ವ ಕೌಶಲ್ಯಗಳು ಮತ್ತುಆಧುನಿಕ ಮ್ಯಾನೇಜರ್‌ಗಳಿಗೆ ನೈತಿಕತೆಯನ್ನು ಬೋಧಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ.












Click it and Unblock the Notifications