ರಾಹುಲ್ ಗಾಂಧಿ ಪಿಎಂ ಆದ್ರೆ ಖುಷಿ ಪಡುವೆ

Manmohan Singh
ನವದೆಹಲಿ, ಮೇ. 24 : ದೇಶಕ್ಕೆ ಯುವನಾಯಕರ ಅಗತ್ಯವಿದೆ. ಕಾಂಗ್ರೆಸ್ ಪಕ್ಷದ ನಾಯಕ ಹಾಗೂ ಯುವಕರ ಕಣ್ಮಣಿ ರಾಹುಲ್ ಗಾಂಧಿ ಇಚ್ಛಿಸಿದಲ್ಲಿ ಅವರಿಗೆ ಕೇಂದ್ರದ ಕ್ಯಾಬಿನೆಟ್ ನಲ್ಲಿ ಸ್ಥಾನ ನೀಡಲಾಗುವುದು ಎಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. ಆದರೆ, ರಾಹುಲ್ ಪ್ರಧಾನಮಂತ್ರಿಯಾದರೆ ಅದಕ್ಕಿಂತ ಖುಷಿ ವಿಷಯ ಮತ್ತೊಂದಿಲ್ಲ ಎಂದು ಅವರು ಹೇಳಿದ್ದಾರೆ.

ಯುಪಿಎ2 ಅಧಿಕಾರಕ್ಕೆ ಬಂದು ಒಂದು ಕಳೆದದ್ದು, ಪ್ರಥಮ ವರ್ಷದ ಅಂಗವಾಗಿ ಸರಕಾರದ ಸಾಧನೆ, ಸಾಗಿರುವ ಹಾದಿ ಮುಂದಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು. ಸದ್ಯಕ್ಕೆ ರಾಜಕೀಯದಿಂದ ನಿವೃತ್ತಿ ಹೊಂದುವ ಇರಾದೆ ನನಗಿಲ್ಲ. ನಮ್ಮ ಮುಂದೆ ಅನೇಕ ಸವಾಲುಗಳಿವೆ. ಈ ಎಲ್ಲ ಸಮಸ್ಯೆಗಳಿಗೆ ಸ್ಪಷ್ಟ ಸೂತ್ರ ಕಂಡುಹಿಡಿಯಬೇಕಿದೆ ಎಂದು ಮನಮೋಹನ್ ಸಿಂಗ್ ಸ್ಪಷ್ಟಪಡಿಸಿದರು.

ದೇಶಕ್ಕೆ ಇದೀಗ ಯುವನಾಯಕರ ಅವಶ್ಯಕತೆ ಇದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಟ್ಟಪಟ್ಟರೆ ಅವರನ್ನು ಕೇಂದ್ರ ಸಂಪುಟಕ್ಕೆ ತೆಗೆದುಕೊಳ್ಳಲಾಗುವುದು. ಇದರ ಯುಪಿಎ ಸರಕಾರದ ಸಂಪುಟದಲ್ಲಿ ಅನೇಕ ಯುವಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಸಿಂಗ್ ಹೇಳಿದರು.

ಭಾರತ ಪಾಕಿಸ್ತಾನ ಸ್ನೇಹ ಬಾಂಧವ್ಯಕ್ಕೆ ಸರಕಾರ ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೆ, ಉಭಯ ದೇಶಗಳ ನಡುವೆ ನಂಬಿಯ ಕೊರತೆ ಇರುವುದರಿಂದ ಸಮಸ್ಯೆ ಸಮಸ್ಯೆಯಾಗಿಯೇ ಉಳಿದುಕೊಂಡಿದೆ ಎಂದರು. ಕಾಶ್ಮೀರ ಪ್ರತ್ಯೇಕತೆಗಾಗಿ ಹೋರಾಟ ನಡೆಸುತ್ತಿರುವ ಸಂಘಟನೆಗಲೊಂದಿಗೆ ಮಾತುಕತೆ ನಡೆಸಲು ಸರಕಾರ ರೆಡಿಯಾಗಿದೆ. ಆದರೆ, ಹಿಂಸಾಚಾರ ಬದಿಗಿಟ್ಟು ಮಾತುಕತೆಗೆ ಬರುವುದಾದರೆ ಸ್ವಾಗತ ಎಂದು ಸಿಂಗ್ ವಿವರಿಸಿದರು. ಕಾಶ್ಮೀರ ವಿವಾದದ ಬಗ್ಗೆ ಪಾಕಿಸ್ತಾನದೊಂದಿಗೂ ಚರ್ಚಿಸಲು ಸಿದ್ಧ ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+