ದೇಶದ 11ನೇ ಅತಿದೊಡ್ಡ ವಿಮಾನ ದುರಂತವಿದು

1962, ಜುಲೈ 7: ಸಿಡ್ನಿಯಿಂದ ಬರುತ್ತಿದ್ದ ಅಲಿಟಾಲಿಯಾ 771 ವಿಮಾನ ಮುಂಬೈನಿಂದ ಈಶಾನ್ಯ ದಿಕ್ಕಿನಲ್ಲಿ 84 ಕಿ.ಮೀ ದೂರದ ಬೆಟ್ಟಕ್ಕೆ ಅಪ್ಪಳಿಸಿ ದುರಂತಕ್ಕೀಡಾಗಿತ್ತು. ಈ ವಿಮಾನ ದುರಂತದಲ್ಲಿ ಒಟ್ಟು 94 ಮಂದಿ ಪ್ರಯಾಣಿಕರು ಮೃತಪಟ್ಟಿದ್ದರು.
1978, ಜನವರಿ 1: ದುಬೈಗೆ ಹೊರಟಿದ್ದ ಏರ್ ಇಂಡಿಯಾ 855 ವಿಮಾನ ಮುಂಬೈನ ಬಾಂದ್ರಾ ಸಮೀಪದಲ್ಲಿ ಆಘಾತಕ್ಕೀಡಾಗಿತ್ತು. ಈ ವಿಮಾನ ದುರಂತದಲ್ಲಿ ಒಟ್ಟು 213 ಮಂದಿ ಸಾವಪ್ಪಿದ್ದರು.
1982, ಜೂನ್ 21: ಕೌಲಾಲಂಪುರದಿಂದ ಚೆನ್ನೈಗೆ ಮರಳುತ್ತಿದ್ದ ಏರ್ ಇಂಡಿಯಾ 403 ವಿಮಾನ ಮುಂಬೈನ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತಕ್ಕೀಡಾಗಿತ್ತು. ಈ ದುರಂತದಲ್ಲಿ 12 ಮಂದಿ ವಿಮಾನ ಸಿಬ್ಬಂದಿಯಲ್ಲಿ ಇಬ್ಬರನ್ನು ಹಾಗೂ ಒಟ್ಟು 99 ಮಂದಿ ಪ್ರಯಾಣಿಕರಲ್ಲಿ 15 ಮಂದಿಯನ್ನು ಆಹುತಿ ತೆಗೆದುಕೊಂಡಿತ್ತು.
1985, ಜೂನ್ 23: ಮಾಂಟ್ರಿಯಲ್ ನಿಂದ ಲಂಡನ್ ಹಾಗೂ ದೆಹಲಿ ಮೂಲಕ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ 182 ವಿಮಾನ ಐರಿಷ್ ವಾಯುನೆಲೆಯಲ್ಲಿ ಸ್ಫೋಟಗೊಂಡ ಪರಿಣಾಮ 329 ಮಂದಿ ದಾರುಣ ಸಾವಪ್ಪಿದ್ದರು.
1988, ಅಕ್ಟೋಬರ್ 19: ಮುಂಬೈನಿಂದ ಅಹಮದಾಬಾದ್ ಗೆ ತೆರಳುತ್ತಿದ್ದ ಏರ್ ಇಂಡಿಯಾ 113 ವಿಮಾನ ಅಪಘಾತಕ್ಕೀಡಾಗಿ ಅದರಲ್ಲಿದ್ದ 130 ಮಂದಿ ಸುಟ್ಟು ಕರಕಲಾಗಿದ್ದರು.
1990, ಫೆಬ್ರವರಿ 14: ಮುಂಬೈನಿಂದ ಬೆಂಗಳೂರು ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ನ 605 ವಿಮಾನ ಮಾರ್ಗಮಧ್ಯದಲ್ಲೆ ಅಪಘಾತಕ್ಕೀಡಾಗಿತ್ತು. ಈ ದುರಂತದಲ್ಲಿ 92 ಮಂದಿ ಮೃತಪಟ್ಟಿದ್ದರು. ಪವಾಡಸದೃಶ ರೀತಿಯಲ್ಲಿ 54 ಜನ ಬದುಕುಳಿದಿದ್ದರು.
1991, ಆಗಸ್ಟ್ 16: ಕೋಲ್ಕತ್ತಾದಿಂದ ಹೊರಟಿದ್ದ ಇಂಡಿಯನ್ ಏರ್ ಲೈನ್ಸ್ ನ 257 ವಿಮಾನ ಇಂಫಾಲ್ ನಿಂದ ನೈಋತ್ಯ ದಿಕ್ಕಿನಲ್ಲಿ 40 ಕಿ.ಮೀ ದೂರದಲ್ಲಿರುವ ಬೆಟ್ಟಕ್ಕೆ ಅಪ್ಪಳಿಸಿ ವಿಮಾನದಲ್ಲಿದ್ದ ಎಲ್ಲಾ 69 ಮಂದಿಯನ್ನು ಬಲಿತೆಗೆದುಕೊಂಡಿತ್ತು.
1993, ಏಪ್ರಿಲ್ 26: ಔರಂಗಾಬಾದ್ ನಲ್ಲಿ ಟೇಕಾಫ್ ಆಗುವ ಸಮಯದಲ್ಲಿ ಟ್ರಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಂಡಿಯನ್ ಏರ್ ಲೈನ್ಸ್ ನ 491 ವಿಮಾನ ದುರಂತಕ್ಕೀಡಾಗಿ 63 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಈ ದುರಂತದಲ್ಲಿ ಐದು ಮಂದಿ ಬದುಕುಳಿದಿದ್ದರು.
1996, ನವೆಂಬರ್12: ಸೌದಿ ಅರೇಬಿಯಾದ 763 ವಿಮಾನ ಹಾಗೂ ಕಜಕಿಸ್ತಾನದ 1907 ವಿಮಾನ ಆಕಾಶದಲ್ಲೇ ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡು ದುರಂತಕ್ಕೀಡಾಗಿತ್ತು. ಈ ದುರಂತ ದೆಹಲಿ ಬಳಿಯ ಚಕ್ರಿ ದಾದ್ರಿ ಹಳ್ಳಿಯ ಬಳಿ ನಡೆದಿತ್ತು. ದುರಂತದಲ್ಲಿ 349 ಮಂದಿ ಸಾವಪ್ಪಿದ್ದರು.
2000, ಜುಲೈ 17: ಅಲಯನ್ಸ್ ನ ಸಿಡಿ 7412 ವಿಮಾನ ಪಾಟ್ನಾ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ 60 ಮಂದಿ ಮೃತಪಟ್ಟಿದ್ದರು.
* ಬಜ್ಪೆಯಲ್ಲಿ ನಕರಸದೃಶ ವಾತಾವರಣ
* ವಿಮಾನ ಅಪಘಾತ; ಮಳೆಯ ನಡುವೆ ರಕ್ಷಣಾ ಕಾರ್ಯ
* ಅಪಘಾತಕ್ಕೀಡಾದ ವಿಮಾನ ಪೈಲಟ್ ಝೆಡ್ ಗ್ಲೂಸಿಯಾ
ವಿಡಿಯೋ
* ವಿಡಿಯೋ : ಬೆಂಕಿ ಉಂಡೆಯಂತಾದ ವಿಮಾನ
* ವಿಡಿಯೋ : ಪುಟ್ಟ ರನ್ ವೇ ಜಿಗಿದ ಏರ್ ಇಂಡಿಯಾ ವಿಮಾನ
* ವಿಡಿಯೋ : ದುರಂತಕ್ಕೆ ಪೈಲಟ್ ತಪ್ಪು ಕಾರಣ?
* ವಿಡಿಯೋ : ಮಂಗಳೂರು ವಿಮಾನ ದುರಂತದಲ್ಲಿ 160 ಸಾವು











Click it and Unblock the Notifications