ಮೀನುಗಾರರ ತುತ್ತಿಗೆ ಕೈಹಾಕಿದ ಲೈಲಾ
ಬೆಂಗಳೂರು,
ಮೇ. 21 : ಆಂಧ್ರದ ಕರಾವಳಿಗೆ ಅಪ್ಪಳಿಸಿರುವ ಲೈಲಾ ಚಂಡಮಾರುತದಿಂದಾಗಿ ರಾಜ್ಯಾದ್ಯಂತ ಮೋಡ ಮುಸುಕಿದ ವಾತಾವರಣವಿದೆಯಾದರೂ, ದಕ್ಷಿಣ ಕನ್ನಡ, ಕೊಡಗು, ಬಾಗಲಕೋಟಿ, ಕೊಪ್ಪಳ, ಬಿಜಾಪುರ ಜಿಲ್ಲೆಗಳಲ್ಲಿ ಮಾತ್ರ ಮಳೆಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಅರಬ್ಬೀ ಸಮುದ್ರದಲ್ಲಿ ಭಾರಿ ಪ್ರಮಾಣದ ಅಲೆಗಳ ಏಳುತ್ತಿರುವುದು ಹಾಗೂ ಬಲವಾದ ಗಾಳಿ ಬೀಸುವುತ್ತಿರುವುದರಿಂದ ಎರಡು ದಿನಗಳ ಕಾಲ ಮೀನುಗಾರರಿಗೆ ಸಮುದ್ರ ಇಳಿಯದಂತೆ ಸೂಚನೆ ನೀಡಿದ್ದರಿಂದ ಸಾವಿರಾರು ಬೋಟುಗಳು ದಡದಲ್ಲಿ ಲಂಗುರ ಹಾಕಿವೆ. id="toptextpromo">ಲೈಲಾ
ಚಂಡಮಾರುತ ಈಗಾಗಲೇ 16ಕ್ಕೂ ಮಂದಿಯನ್ನು ಬಲಿ ತೆಗೆದುಕೊಂಡಿದೆ. ಆಂಧ್ರಪ್ರದೇಶದ ನೂರಾರು ಹಳ್ಳಿಗಳು ನೀರಿನಲ್ಲಿ ಮುಳುಗಿವೆ, ಮಾರು 50 ಸಾವಿರ ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ. ಆದರೆ, ಇಂದು ಲೈಲಾ ಅಬ್ಬರ ತಗ್ಗಿದ್ದು, ಲೈಲಾ ಒರಿಸ್ಸಾದ ಕಡೆಗೆ ಮುಖ ಮಾಡಿದೆ. ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ಇದರ ಪ್ರಮಾಣ ಕಡಿಮೆಯಾಗಿದೆ. ಆದರೆ, ಮೋಡ ಮುಸುಕಿದ ವಾತಾವರಣ ಮುಂದುವರೆದಿದೆ. ಬಂಗಾಲಕೊಲ್ಲಿಯಿಂದ ಮರುಹುಟ್ಟು ಪಡೆಯುವ ಸಾಧ್ಯತೆ ಇರುವುದರಿಂದ ಇನ್ನೂ ಭೀತಿ ದೂರವಾಗಿಲ್ಲ. id='are-slot-1' class='oiad oi-axt oiadv'> id='top-searched-articles'>ರಾಜ್ಯದ
ಕರಾವಳಿ ಮತ್ತು ಉತ್ತರ ಕರ್ನಾಟಕದ ಮೇಲೆ ಲೈಲಾ ಪ್ರಭಾವ ಹೆಚ್ಚಾಗಿರುವುದರಿಂದ ಸರಕಾರದ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ಗುರುವಾರ ವಿಡಿಯೋ ಕಾನ್ಫ್ ರೆನ್ಸ್ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಜಗದೀಶ್ ಶೆಟ್ಟರ್, ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಅಲ್ಲದೇ ಉತ್ತರ ಕರ್ನಾಟಕದ ಎಲ್ಲ ಜಿಲ್ಲಾಧಿಕಾರಿಗಳಿಗೆ ಆದೇಶಸಲಾಗಿದ್ದು, ಲೈಲಾ ಎದುರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.











Click it and Unblock the Notifications