ರಾಜ್ಯಪಾಲರೇ ರಾಜಕಾರಣ ಮಾಡ್ಬೇಡಿ : ಈಶ್ವರಪ್ಪ
ಮೈಸೂರು,
ಮೇ. 19 : ರಾಜ್ಯಾಂಗದ ಅಂಗವಾಗಿರುವ ರಾಜ್ಯಪಾಲರೇ ರಾಜಕಾರಣ ಮಾಡಬೇಡಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಮನವಿ ಮಾಡಿಕೊಂಡಿದ್ದಾರೆ. id="toptextpromo">ನಗರದ
ಶ್ರೀ ಗಣಪತಿ ಸಚ್ಚಿದಾನಂದ ಅಶ್ರಮದ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರ ಬಗ್ಗೆ ಸರಕಾರಕ್ಕೆ ಅಪಾರ ಗೌರವವಿದೆ ಎಂದರು. ಸಂಘರ್ಷಕ್ಕೆ ಎಡೆಮಾಡಿಕೊಡದೆ, ವ್ಯವಹಾರಕ್ಕೆ ಸಂಬಂಧಿಸಿದ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದು ಸೂಕ್ತ. ಈ ವಿಚಾರದಲ್ಲಿ ಯಾರದು ಸರಿ, ತಪ್ಪು ಎಂದು ಹೇಳಲು ಬಯಸುವುದಿಲ್ಲ. ಸಚಿವ ಜನಾರ್ದನರೆಡ್ಡಿ ಅವರಿಗೆ ನೋಟಿಸ್ ನೀಡಿರುವ ಕ್ರಮ ಕುರಿತು ಪ್ರತಿಕ್ರಿಯೆ ನೀಡುವುದಿಲ್ಲ ಎಂದರು. id='are-slot-1' class='oiad oi-axt oiadv'> id='top-searched-articles'>ರಾಜ್ಯಪಾಲರ
ಕ್ರಮ ಟೀಕಿಸಿರುವ ಸಚಿವ ಜನಾರ್ದನರೆಡ್ಡಿ ವಿರುದ್ಧ ಕ್ರಮಕೈಗೊಳ್ಳಲು ಅಂಜಿಕೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರಿಗೂ ಹೆದರಲ್ಲ. ಯಾರ ಮುಲಾಜೂ ನನಗಿಲ್ಲ. ಒಂದು ವೇಳೆ ರೆಡ್ಡಿ ಸೋದರರಿಂದ ತಪ್ಪಾಗಿದ್ದರೆ ಸುಪ್ರಿಂಕೋರ್ಟ್ ಶಿಕ್ಷೆ ನೀಡಲಿ, ಗಣಿ, ಲಿಕ್ಕರ್ ಲಾಬಿ ಎಲ್ಲ ಸರಕಾರದಲ್ಲೂ ಇದೆ. ವ್ಯವಹಾರ ಮಾಡುವವರು ಹಿಂದಿನ ಸರಕಾರದಲ್ಲೂ ಇದ್ದರು ಎಂದು ಈಶ್ವರಪ್ಪ ಸಮರ್ಥಿಸಿಕೊಂಡರು.











Click it and Unblock the Notifications