ಗೋವಾದ ಮೋಪಾದಲ್ಲಿ ಹೊಸ ವಿಮಾನನಿಲ್ದಾಣ

Air India
ಗೋವಾ, ಮೇ. 17:ಗೋವಾದ ಬೀಚ್ ಗಳ ಸೌಂದರ್ಯ ಸವಿಯಲು ವಿಶ್ವದಾದ್ಯಂತದಿಂದ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಸರ್ಕಾರ ಇನ್ನೊಂದು ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ಗೋವಾದಲ್ಲಿ ಈಗಿರುವ ಏಕೈಕ ವಿಮಾನ ನಿಲ್ದಾಣ ರಾಜ್ಯ ಸರ್ಕಾರ ಮತ್ತು ನೌಕಾ ಪಡೆಗೆ ಸೇರಿದ್ದು ಇನ್ನೊಂದು ವಿಮಾನ ನಿಲ್ದಾಣದ ನಿರ್ಮಾಣದ ನಂತರವೂ ಸರ್ಕಾರ ಹಳೆಯ ನಿಲ್ದಾಣವನ್ನು ನಾಗರಿಕ ವಿಮಾನಗಳಿಗೆ ಬಳಸಿಕೊಳ್ಳಲು ಅನುಮತಿ ನೀಡಲಿದೆ.

ಹೊಸ ವಿಮಾನ ನಿಲ್ದಾಣವೊಂದನ್ನು ಗೋವಾದ ಉತ್ತರ ಭಾಗದ ಮೋಪಾದಲ್ಲಿ ಖಾಸಗೀ ಪಾಲುದಾರಿಕೆಯೊಂದಿಗೆ ನಿರ್ಮಿಸಲಾಗುತ್ತಿದೆ. ಈಗಿರುವ ವಿಮಾನ ನಿಲ್ದಾಣವನ್ನು ವಿಮಾನ ನಿಲ್ದಾಣ ಪ್ರಾಧಿಕಾರ ನಿರ್ವಹಿಸುತಿದ್ದು ಇದು ದಕ್ಷಿಣ ಗೋವಾದ ದಬೋಲಿಮ್ ನಲ್ಲಿದ್ದು ಇಲ್ಲಿ ವಾರ್ಷಿಕ 2.7 ಮಿಲಿಯ ಪ್ರಯಾಣಿಕರು ಪ್ರಯಾಣಿಸುತ್ತಾರೆ.

ಹೊಸ ವಿಮಾನ ನಿಲ್ದಾಣದ ನಿರ್ಮಾಣದ ನಂತರ ಹಳೆಯ ವಿಮಾನ ನಿಲ್ದಾಣಗಳು ಕಾರ್ಯಸ್ಥಗಿತ ಮಾಡುವುದು ವಾಡಿಕೆ. ಆದರೆ, ಇದಕ್ಕೆ ಗೋವಾ ಹೊರತಾಗಿದೆ. ಈ ಹಿಂದೆ ಬೆಂಗಳೂರು ಮತ್ತು ಹೈದರಾಬಾದ್ ನ ಹೊಸ ವಿಮಾನ ನಿಲ್ದಾಣಗಳ ಉದ್ಘಾಟನೆಯ ನಂತರ ಹಳೆ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಗೋವದಲ್ಲಿ ಈಗಿರುವ ವಿಮಾನ ನಿಲ್ದಾಣವನ್ನು ಮುಚ್ಚಿದರೆ ದಕ್ಷಿಣ ಗೋವಾದ ವಾಣಿಜ್ಯ ವಹಿವಾಟಿಗೆ ಮತ್ತು ಪ್ರವಾಸಿಗರಿಗೆ ತೊಂದರೆಯಾಗಲಿದೆ ಎಂಬ ಹಿನ್ನೆಲೆಯಲ್ಲಿ ಈಗಿರುವ ವಿಮಾನ ನಿಲ್ದಾಣವನ್ನೂ ಉಳಿಸಿಕೊಳ್ಳಲು ನಿರ್ದರಿಸಲಾಗಿದೆ. ಈಗಿರುವ ವಿಮಾನ ನಿಲ್ದಾಣದಲ್ಲಿ ವಿಸ್ತರಣೆಗೆ ಅವಕಾಶವಿಲ್ಲ ಮತ್ತು ಸರಕು ಸಾಗಾಟ ಸಮುಚ್ಚಯವನ್ನು ನಿರ್ಮಿಸಲು ಸಾಧ್ಯವಿಲ್ಲದ ಕಾರಣ ನೂತನ ವಿಮಾನ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. ಸರ್ಕಾರ ದೇಶಾದ್ಯಂತ 35 ವಿಮಾನ ನಿಲ್ದಾಣಗಳ ನಿರ್ಮಾಣಕ್ಕೆ ಮುಂದಾಗಿದ್ದು ಕರ್ನಾಟಕ, ಸಿಕ್ಕಿಂ ನಲ್ಲಿ ಹೊಸ ವಿಮಾನ ನಿಲ್ದಾಣಗಳು ಮುಂದಿನ 2-3 ವರ್ಷಗಳಲ್ಲಿ ಕಾರ್ಯಾರಭ ಮಾಡಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+