ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಯೋತ್ಪಾದರ ಸಂಬಳ 10 ಸಾವಿರಕ್ಕೆ ಏರಿಕೆ!

By Mrutyunjaya Kalmat
|
Google Oneindia Kannada News

Terrorists
ನವದೆಹಲಿ, ಮೇ. 17 : ಸರಕಾರಿ, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಪ್ರತಿ ವರ್ಷ ಸಂಬಳ ಹೆಚ್ಚಳ ಮಾಡುವುದು ವಾಡಿಕೆ. ಆದರೆ, ಭಯೋತ್ಪಾದನೆಯಲ್ಲಿ ತೊಡಗಿರುವ ಉಗ್ರರಿಗೂ ಸಂಬಳ ಹೆಚ್ಚಳ ಮಾಡುವುದೆಂದರೆ ? ನಿಜ, ಭಾರತದ ಮೇಲೆ ಯುದ್ಧ ಸಾರಿ ಪಾಕ್ ಆಕ್ರಮಿತ ಭಾರತೀಯ ನೆಲೆದಲ್ಲಿ ವಾಸವಾಗಿರುವ ಉಗ್ರರಿಗೆ ಪಾಕಿಸ್ತಾನ ತಿಂಗಳಿಗೆ ಬರೋಬ್ಬರಿ 2000 ರುಪಾಯಿಗಳ ಸಂಬಳ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಜಮ್ಮು ಕಾಶ್ಮೀರದಲ್ಲಿ ನಿತ್ಯಾ ಹಿಂಸಾಚಾರಕ್ಕಿಳಿಯುವ ಉಗ್ರರಿಗೆ ಪಾಕಿಸ್ತಾನದ ಐಎಸ್ಐ ನೇಮಿಸಿದ ಕೆಲ ಏಜನ್ಸಿಗಳು ಸಂಬಳ ಏರಿಕೆ ಘೋಷಣೆ ಮಾಡಿದ್ದು. ತಿಂಗಳಿಗೆ 8,000 ದಿಂದ 10,000 ವರೆಗೆ ಹೆಚ್ಚಿಸಲಾಗಿದೆ. ಈವರೆಗೂ ಉಗ್ರರಿಗೆ ಕೇವಲ 5,000 ರುಪಾಯಿಗಳನ್ನು ಮಾತ್ರ ನೀಡಲಾಗುತ್ತಿತ್ತು. 2010ರಲ್ಲಿ ಉಗ್ರರಿಗೂ ಬಂಪರ್ ಹೊಡೆದಿದೆ. ಶೇ.100 ರಷ್ಟು ಸಂಬಳ ಏರಿಕೆಯಾಗಿದೆ.

ಸಂಬಳ ಹೆಚ್ಚಳಕ್ಕೆ ಬಲವಾದ ಕಾರಣವನ್ನು ನೀಡಿರುವ ಏಜನ್ಸಿಗಳು, ಇತ್ತೀಚೆಗೆ ಉಗ್ರರು ಹೋರಾಟಕ್ಕೆ ನಿರಾಸೆ ತೋರಿಸುತ್ತಿದ್ದಾರೆ. ಜೊತೆಗೆ ಭಾರತ ಸರಕಾರದ ಕಠಿಣ ಕ್ರಮದಿಂದಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರದ ಪ್ರಮಾಣ ಕಡಿಮೆಯಾಗಿದೆ. ಜಾಗತಿಕ ಮಟ್ಟದಲ್ಲಿ ಕಾಶ್ಮೀರ ವಿವಾದವನ್ನು ದೊಡ್ಡ ಅಸ್ತ್ರವಾಗಿ ಬಳಸಿಕೊಳ್ಳಿತ್ತಿರುವ ಪಾಕಿಸ್ತಾನಕ್ಕೆ ಈ ವಿವಾದವನ್ನು ತಣ್ಣಗಾಗಲು ಬಿಡಬಾರದು ಎನ್ನುವ ಇರಾದೆ. ಹಾಗಾಗಿ ಕಾಶ್ಮೀರ ವಿಷಯವನ್ನು ಇನ್ನಷ್ಟು ಕಗ್ಗಂಟು ಮಾಡುವುದಕ್ಕಾಗಿ ಹಿಂಸಾಚಾರ ಪ್ರಚೋದನೆ ನೀಡುತ್ತಿದೆ. ಸದ್ಯ 25 ವರ್ಷದೊಳಗಿನೆ ಸುಮಾರು 800 ಉಗ್ರರು ಕಾರ್ಯಪ್ರವೃತ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X