ಅಕ್ರಮ ಸಂಬಂಧ : ಪತ್ನಿಯ ಗುಪ್ತಾಂಗಕ್ಕೆ ಬರೆ!
ರಾಂಚಿ,
ಮೇ. 16 : ಹೆಂಡತಿ ಶೀಲ ಶಂಕಿಸಿ ಪತಿಯೊಬ್ಬ ಆಕೆಯ ಗುಪ್ತಾಂಗದ ಮೇಲೆ ಬರೆ ಹಾಕಿ ಕಬ್ಬಿಣದ ವೈರ್ ನಿಂದ ಗುಪ್ತಾಂಗವನ್ನು ಹೊಲಿದ ಪೈಶಾಚಿಕೆ ಕೃತ್ಯ ಜಾರ್ಖಂಡ್ ನ ಧನಬಾದ್ ಜಿಲ್ಲೆಯಲ್ಲಿ ನಡೆದಿದೆ. id="toptextpromo">ಕಲ್ಲಿದ್ದಲು
ನಗರಿ ಎಂದೇ ಖ್ಯಾತಿ ಹೊಂದಿರುವ ದಾವೋದರಪುರದ ಸಾವಿತ್ರಿ ಎಂಬಾಕೆಯೇ ಗಂಡನ ರಾಕ್ಷಿಸಿ ಕೃತ್ಯದಿಂದ ನರಳುತ್ತಿರುವ ನತದೃಷ್ಟೆ. ಈಗ ಅವಳು ಪಾಟಲೀಪುತ್ರ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸಿದ್ದಾಳೆ. ಪತ್ನಿ ಸಾವಿತ್ರಿ ತವರೂರಿನಲ್ಲಿ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಸಿಟ್ಟಿಗೆದ್ದ ಗಂಡ ಸನ್ನಿಮಾರ್ ಮುಂಡಾ, ಕಾಯ್ದ ಕಬ್ಬಿಣದ ಸರಳನ್ನು ಗುಪ್ತಾಂಗದ ಮೇಲಿಟ್ಟು ವೈರ್ ನಿಂದ ಹೊಲಿಗೆ ಹಾಕಿದ್ದಾನೆ ಎಂದು ಆಕೆಯ ತಾಯಿ ಕುಲ್ವಾನಿದೇವಿ ಪೊಲೀಸರಿಗೆ ದೂರು ನೀಡಿದ್ದಾಳೆ. id='are-slot-1' class='oiad oi-axt oiadv'> id='top-searched-articles'>ಧನಬಾದ್
ಪೊಲೀಸರು ಸನ್ನಿಮಾರ್ ಮುಂಡಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಕೃತ್ಯ ಎಸಗಿದ ನಂತರ ಮುಂಡಾ ನಾಪತ್ತೆಯಾಗಿದ್ದಾನೆ. 30 ವರ್ಷಗಳ ವೈದ್ಯಕೀಯ ಸೇವೆಯಲ್ಲಿ ಇಂತಹ ಕ್ರೋರ ಕೃತ್ಯವನ್ನು ನೋಡಿರಲಿಲ್ಲ ಎಂದು ವೈದ್ಯರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.











Click it and Unblock the Notifications