ಆತ್ಮೀಯರು ಕಂಡಾಗ ಕಣ್ಣೀರಿಟ್ಟ ಹಾಲಪ್ಪ
ಶಿವಮೊಗ್ಗ,
ಮೇ. 14 : ನಿನ್ನೆ ಮೊನ್ನೆಯವರೆಗೂ ಗೂಟದ ಕಾರು, ರಕ್ಷಣೆಗೆ ಖಾಕಿ ಪಡೆ, ಹೋದಲ್ಲಿ ಬಂದಲ್ಲಿ ಕಾರ್ಯಕರ್ತರ ದಂಡು ಹೊಂದಿದ್ದ ವ್ಯಕ್ತಿಯೊಬ್ಬನಿಗೂ ಏಕಾಏಕಿ ಗಂಭೀರ ಆರೋಪವೊಂದು ತಲೆ ಮೇಲೆ ಸುತ್ತಿಕೊಂಡು ರಕ್ಷಣೆಗೆ ನಿಂತ ಮಂದಿಯೇ ಜೈಲಿಗೆ ಕರೆದುಕೊಂಡು ಹೋಗುವುದೆಂದರೆ, ಹೀಗಂತ, ಮಾಜಿ ಸಚಿವ ಹರತಾಳು ಹಾಲಪ್ಪನವರ ಆಪ್ತ ವಲಯ ಹೀಗೆ ಮರುಗುತ್ತಿದೆ. ಆತ್ಮೀಯರ ಕಂಡ ಕೂಡಲೇ ಹಾಲಪ್ಪ ಕಣ್ಣೀರಿಡುತ್ತಿರುವುದು ಲೇಟೆಸ್ಟ್ ಸುದ್ದಿಯಾಗಿದೆ. ಹಾಗೆಯೇ ಹಾಲಪ್ಪ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಕರೆತರಲಾಗಿದೆ. id="toptextpromo">ಅದೇ
ಇರಲಿ, ಅತ್ಯಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿದ್ದು, ಅನಾರೋಗ್ಯ ತೊಂದರೆಯಿಂದ ಮಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಹಾಲಪ್ಪ, ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಮೌನಕ್ಕೆ ಶರಣಾಗಿರುವ ಅವರು, ಯಾರ ಜೊತೆಗೂ ಮಾತನಾಡಲು ಇಷ್ಟಪಡುತ್ತಿಲ್ಲ. ಸದಾ ಮೌನವಾಗಿ ಕಣ್ಣು ಮುಚ್ಚಿ ಮಲಗಿರುತ್ತಾರೆ ಎಂದು ದಾದಿಯರು ಹೇಳುತ್ತಾರೆ. ಯಾರನ್ನೂ ಭೇಟಿ ಮಾಡಲು ಅವರು ಇಷ್ಟಪಡುತ್ತಿಲ್ಲ.ಗ್ಯಾಲರಿ:
ಹಾಲಪ್ಪಗೆ
ಸುಸ್ತೋ
ಸುಸ್ತು
id='are-slot-1'
class='oiad
oi-axt
oiadv'>
id='top-searched-articles'>
ಕುಟುಂಬದ
ಕೆಲ ಸದಸ್ಯರು ಮತ್ತು ಆತ್ಮೀಯರು ಭೇಟಿ ಮಾಡುತ್ತಿದ್ದಾರೆ. ಇವರ ಜೊತೆ ಕೂಡ ಸರಿಯಾಗಿ ಮಾತನಾಡುತ್ತಿಲ್ಲ. ತಲೆ ತಗ್ಗಿಸಿಕೊಂಡು ಕೂತಿರುತ್ತಾರೆ ಎನ್ನಲಾಗಿದೆ. ಹಾಲಪ್ಪ ವಾರ್ಡ್ ಗೆ ಯಾರನ್ನೂ ಬಿಡುತ್ತಿಲ್ಲ. ಇದೀಗ ಬಂದಿರುವ ವರದಿಯಂತೆ ಹಾಲಪ್ಪ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದು, ಪರಪ್ಪನ ಆಗ್ರಹಾರ ಜೈಲಿನಲ್ಲಿ ಇರಿಸಲಾಗಿದೆ. ಜೈಲಿನಲ್ಲಿ ಡಾ ತಿಲಕ್ ನೇತೃತ್ವದ ಐವರು ತಜ್ಞ ವೈದ್ಯರ ತಂಡವೊಂದು ಅವರಿಗೆ ಚಿಕಿತ್ಸೆ ನೀಡುತ್ತಿದೆ.











Click it and Unblock the Notifications