ಮಹೀಂದ್ರಾ ಸತ್ಯಂನಲ್ಲಿ ಕೆಲ್ಸ ಬಿಡುವವರ ಸಂಖ್ಯೆ ಹೆಚ್ಚಳ

ಕಂಪೆನಿಯಲ್ಲಿ ಮದ್ಯಮ ಮತ್ತು ಉನ್ನತ ಶ್ರೇಣಿಯ ಅದಿಕಾರಿಗಳ ವಲಸೆ ಹೆಚ್ಚಳ ದಾಖಲಿಸಿದೆ . ಸಾಮಾನ್ಯ ನೌಕರರಿಗಿಂತ ಕಂಪೆನಿಯ ಆಧಾರ ಸ್ಥಂಭಗಳಾದ ಅಧಿಕಾರಿಗಳೇ ಉದ್ಯೋಗ ತೊರೆಯುತ್ತಿರುವುದು ಆಡಳಿತ ವರ್ಗವನ್ನು ಚಿಂತೆಗೀಡುಮಾಡಿದೆ. ಉದ್ಯಮದಲ್ಲಿ ನೌಕರರು ಮತ್ತು ತಂತ್ರಜ್ಞರಿಗೆ ಹೆಚ್ಚಿದ ಬೇಡಿಕೆಯಿಂದ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ.
ಕಂಪೆನಿಯ ಬ್ಯಾಂಕಿಂಗ್ ಹಣಕಾಸು ಸೇವೆಗಳ ಮತ್ತು ವಿಮೆ ವಿಭಾಗದ ಮುಖ್ಯಸ್ಥ ಸಾಯಿ ಕೃಷ್ಣ ಹಾಗೂ ಮಾರಾಟ ಪೂರ್ವ ಮುಖ್ಯಸ್ಥ ಪವನ್ ಕುಮಾರ್ ಉದ್ಯೋಗ ತೊರೆದಿದ್ದಾರೆ, ಉದ್ಯಮದಲ್ಲಿ ಉದ್ಯೋಗ ತೊರೆಯುವವರ ಸಂಖ್ಯೆ ಸರಾಸರಿ ಶೇ.15 ಆಗಿದ್ದರೆ ಮಹೀಂದ್ರಾ ಸತ್ಯಂ ನಲ್ಲಿ ಈ ಸಂಖ್ಯೆ ಶೇ.20 ಆಗಿದೆ.
ಮಹೀಂದ್ರಾ ಸತ್ಯಂ ವ ವ್ಯವಹಾರ ಏರಿಕೆಯಾಗಿದ್ದು , ಸ್ಥಿರವಾಗಿದ್ದರೂ ವಲಸೆ ಸಂಖ್ಯೆ ಯ ಹೆಚ್ಚಳ ಆಡಳಿತ ವರ್ಗವನ್ನು ಚಿಂತೆಗೀಡುಮಾಡಿದೆ . ರಾಜುವಿನ ಅಧಿಕಾರಾವಧಿಯಲ್ಲಿ ಆರಾಮವಾಗಿದ್ದ ಕೆಲ ಅಧಿಕಾರಿಗಳಿಗೆ ಈಗಿನ ಆಡಳಿತ ವರ್ಗ ದಕ್ಷತೆಯ ಕೆಲಸ ಅಪೇಕ್ಷಿಸುತ್ತಿರುವದರಿಂದಲೂ ಉದ್ಯೋಗ ತೊರೆಯುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ .











Click it and Unblock the Notifications