• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮೇ 26ರ ವರಗೆ ಜೈಲಿನಲ್ಲಿ ನಿತ್ಯಾನಂದ

By Mrutyunjaya Kalmat
|

ಬೆಂಗಳೂರು, ಮೇ, 13 : ರಾಸಲೀಲೆ ಪ್ರಕರಣದಡಿ ಬಂಧನದಲ್ಲಿರುವ ನಿತ್ಯಾನಂದನಿಗೆ ಬುಧವಾರ ಕೂಡ ಜೈಲಿನಿಂದ ಮುಕ್ತಿ ಸಿಗಲಿಲ್ಲ. ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ನಿತ್ಯಾನಂದ ನ್ಯಾಯಾಂಗ ಬಂಧನ ಅವಧಿಯನ್ನು ಮೇ 26 ರವರೆಗೆ ವಿಸ್ತರಿಸಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಪುಷ್ಪಾವತಿ ಆದೇಶ ಹೊರಡಿಸಿದ್ದಾರೆ.

ನಿತ್ಯಾನಂದನ ಜಾಮೀನು ಅರ್ಜಿ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಈ ನಡುವೆ ನಿತ್ಯಾನಂದನಿಗೆ ಜಾಮೀನು ಸಿಗದಿರುವುದರಿಂದ ನ್ಯಾಯಾಂಗ ಬಂಧನದಲ್ಲಿಡಲು ನ್ಯಾಯಾಧೀಶರ ಅನುಮತಿ ಪಡೆಯುವ ಅಗತ್ಯವಿದೆ. ಹೀಗಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎನ್ ಆರ್ ಲೋಕೇಶ್ ಅವರು ನ್ಯಾಯಾಂಗ ಅವಧಿಯನ್ನು ವಿಸ್ತರಿಸುವಂತೆ ಕೋರಿ ನ್ಯಾಯಾಧೀಶರಿಗೆ ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನಿತ್ಯಾನಂದನ ಬಂಧನ ಅವಧಿಯನ್ನು ನ್ಯಾಯಾಧೀಶರು ವಿಸ್ತರಿಸಿ ಆದೇಶಿ ಹೊರಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X