Get Updates
Get notified of breaking news, exclusive insights, and must-see stories!

ಅಶ್ಲೀಲ ಮಾತುಗಳ ಕೇಳಿ ಕಣ್ಣೀರಿಟ್ಟ ಸ್ಪೀಕರ್

ಭೋಪಾಲ್, ಮೇ.13: ಸದನಕ್ಕೆ ತಡವಾಗಿ ಬರುವ ಬಿಜೆಪಿಯ ಮಹಿಳಾ ಶಾಸಕಿಯರನ್ನು ಗೇಲಿ ಮಾಡುತ್ತಿದ್ದ ಕಾಂಗ್ರೆಸ್ ಶಾಸಕರ ಅಶ್ಲೀಲ ಮಾತುಗಳನ್ನು ಕೇಳಲಾರದೆ, ಸಭಾಪತಿ ಈಶ್ವರ್ ದಾಸ್ ರೋಹಾನಿ ಅಸಹಾಯಕತೆಯಿಂದ ಕಣ್ಣೀರ ಕೋಡಿ ಹರಿಸಿದ ಪ್ರಸಂಗ ಜರುಗಿದೆ.

ಮದ್ಯಪ್ರದೇಶದ ವಿಧಾನಸಭೆಯ ಅಧಿವೇಶನದಲ್ಲಿ ರಾಜ್ಯದ ಅಭಿವೃದ್ಧಿ ಕಾಮಗಾರಿ ಪ್ರಗತಿ, ಭ್ರಷ್ಟಾಚಾರ ನಿರ್ಮೂಲನೆ, ಇಂಧನ, ಬೆಲೆ ಏರಿಕೆ ನಿಯಂತ್ರಣ ಮುಂತಾದ ಗಹನವಾದ ಚರ್ಚಾ ವಿಷಯಗಳನ್ನು ಬದಿಗೊತ್ತಿ, ಸದನದಿಂದ ಕಾಂಗ್ರೆಸ್ಸಿಗರು ಹೊರ ನಡೆದು ಪ್ರತಿಭಟನೆಗೆ ಮುಂದಾದರು.

ಈ ಸಂದರ್ಭದಲ್ಲಿ ಪ್ರತಿಭಟನೆಯ ಬಿಸಿಯಲ್ಲಿರುವ ಕಾಂಗ್ರೆಸ್ ಶಾಸಕರ ಮುಂದೆ, ತಾಜಾ ಮುಖಗಳನ್ನು ಹೊತ್ತ ಬಿಜೆಪಿಯ ಮಹಿಳಾ ಶಾಸಕಿಯರು ಹಾದು ಹೋಗಿ ಸದನ ಪ್ರವೇಶಿದ್ದಾರೆ. ಇದರಿಂದ ಕುಪಿತರಾದ ಕಾಂಗ್ರೆಸ್ಸಿಗರು, ಬ್ಯೂಟಿ ಪಾರ್ಲರ್ ಗೆ ಹೋಗಿ ಸಮಯ ವ್ಯರ್ಥ ಮಾಡುವ ಇಂಥವರಿಗಿಂತ. . .. ಎಷ್ಟೋ ಮೇಲು. ಜನಸೇವೆಗಿಂತ ಸೌಂದರ್ಯವರ್ಧನೆ ಇವರಿಗೆ ಮುಖ್ಯ ಎಂದು ಅವಾಚ್ಯ ಶಬ್ದಗಳಲ್ಲಿ ಹೀಯಾಳಿಸಿದ್ದಾರೆ.

ಇದರಿಂದ ಮನನೊಂದ ಮಹಿಳಾಮಣಿಗಳು ಸಭಾಪತಿಗಳಿಗೆ ದೂರು ನೀಡಿದ್ದಾರೆ. ಆದರೆ, ದೂರು ಆಲಿಸಿದ ಸಭಾಪರಿ ಈಶ್ವರ್, ಸ್ಥಳದಲ್ಲೇ ಕುಸಿದು, ಗಳಗಳನೆ ಕಣ್ಣೀರಿಟ್ಟಿದ್ದಾರೆ. ಕೊನೆಗೆ, ಮಧ್ಯಪ್ರದೇಶದ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹಾಗೂ ಬಿಜೆಪಿ ಶಾಸಕರು ಸಭಾಪತಿಗೆ ಸಾಂತ್ವನ ಹೇಳಿದ್ದಾರೆ. ಸಂವಿಧಾನ ಬಾಹಿರವಾದ ಕಾಂಗ್ರೆಸ್ ಶಾಸಕರು ಪ್ರತಿಭಟನೆಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಸ್ಪೀಕರ್ ಈಶ್ವರ್ ಪ್ರಸಾದ್ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+