ಮೈಸೂರು ದೇಶದ 2ನೇ ಸ್ವಚ್ಛ ನಗರ

Mysore Cleanest City
ಮೈಸೂರು, ಮೇ. 11: ಕೇಂದ್ರ ನಗರಾಭಿವೃದ್ದಿ ಇಲಾಖೆ ಬಿಡುಗಡೆ ಮಾಡಿರುವ ಸ್ವಚ್ಛ ನಗರಗಳ ಪಟ್ಟಿಯಲ್ಲಿ ಚಂಡೀಗಢ ಮೊದಲ ಸ್ಥಾನದಲ್ಲಿದ್ದರೆ, ರಾಜ್ಯದ ಸಾಂಸ್ಕೃತಿಕ ರಾಜಧಾನಿ ಮೈಸೂರು ಎರಡನೇ ಸ್ಥಾನ ಪಡೆದಿದೆ. ಮೈಸೂರಿನ ಪ್ರಜೆಗಳಿಗೆ, ಇಲ್ಲಿನ ಸ್ಥಳೀಯ ಆಡಳಿತಕ್ಕೆ ಶುಭಾಶಯಗಳು.

ಈ ಪಟ್ಟಿಯಲ್ಲಿ ಬಂದರು ನಗರ ಮಂಗಳೂರು 8 ನೇ ಸ್ಥಾನ ಮತ್ತು ರಾಜಧಾನಿ ಬೆಂಗಳೂರು 12ನೇ ಸ್ಥಾನ ಗಳಿಸಿದೆ. ಕೇಂದ್ರ ನಗರಾಭಿವೃದ್ದಿ ಸಚಿವ ಜೈಪಾಲ್ ರೆಡ್ಡಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.

ಒಟ್ಟು 450 ನಗರಗಳು ಈ ಪಟ್ಟಿಯಲ್ಲಿದ್ದರೂ ವಿಶೇಷವಾಗಿ 25 ಪ್ರಮುಖ ನಗರಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಬಿಡುಗಡೆ ಮಾಡಲಾಗಿದೆ. ನರಂ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡುತ್ತಿರುವ ನಗರಗಳ ಪಟ್ಟಿಯಲ್ಲೂ ಮೈಸೂರು ಮುಂದಿದೆ. ಮೈಸೂರು ಮಹಾನಗರಪಾಲಿಕೆಯಲ್ಲಿ ಜೆಡಿಎಸ್ ಆಡಳಿತವಿದ್ದರೆ ಮಂಗಳೂರು ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದೆ.

ರಾಜ್ಯದ ಮಂಡ್ಯ ಮತ್ತು ಬೀದರ್ ನಗರ ಕ್ರಮವಾಗಿ 15 ನೇ ಮತ್ತು 22ನೇ ಸ್ಥಾನದಲ್ಲಿದೆ. ಸಹ್ಯಾದ್ರಿ ಸೆರಗಿನಲ್ಲಿರುವ ಶಿವಮೊಗ್ಗ ನಗರ 166 ನೇ ಸ್ಥಾನದಲ್ಲಿದೆ. ಈ ಪಟ್ಟಿ ಪ್ರಕಾರ ಸೂರತ್ ಮೂರನೇ ಸ್ಥಾನದಲ್ಲಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ದೆಹಲಿ ಮಹಾನಗರ ನಾಲ್ಕನೇ ಸ್ಥಾನದಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+