ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಲ್ಲರಿಗೂ ವಿದ್ಯುತ್ ನಮ್ಮ ಗುರಿ : ಶಿಂಧೆ

By Mahesh
|
Google Oneindia Kannada News

Sushil Kumar Shinde
ನವದೆಹಲಿ, ಮೇ.3:2012 ನೇ ಇಸವಿಗೆ ಮುಕ್ತಾಯಗೊಳ್ಳುವ 11ನೇ ಪಂಚವಾರ್ಷಿಕ ಯೋಜನೆಯಲ್ಲಿ ದೇಶ 78,577ಮೆಗಾ ವ್ಯಾಟ್ ಗಳಷ್ಟು ಹೆಚ್ಚುವರಿ ವಿದ್ಯುತ್ ಉತ್ಪಾದನೆಯ ಗುರಿ ಹಾಕಿಕೊಂಡಿದ್ದು, ಒಟ್ಟು 74,000 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ಉತ್ಪಾದನೆ ಆಗಲಿದೆ ಎಂದು ಕೇಂದ್ರ ವಿದ್ಯುತ್ ಖಾತೆ ಸಚಿವ ಸುಶೀಲ್ ಕುಮಾರ್ ಶಿಂಧೆ ತಿಳಿಸಿದರು.

ಕೈಗಾರಿಕಾ ಸಂಸ್ಥೆ ಫಿಕ್ಕಿ ನವದೆಹಲಿಯಲ್ಲಿ ಏರ್ಪಡಿಸಿದ್ದ ಇಂಧನ ಕ್ಷಮತೆ ಸಮಾರಂಬದಲ್ಲಿ ಮಾತನಾಡುತಿದ್ದ ಸಚಿವರು ಉತ್ತಮ ಪ್ರಯತ್ನದಿಂದ ಈಗಿರುವ 64 ಸಾವಿರ ಮೆಗಾ ವ್ಯಾಟ್ ಉತ್ಪಾದನೆಯ ಜತೆಗೇ 12 ರಿಂದ 13ಸಾವಿರ ಮೆಗಾ ವ್ಯಾಟ್ ಗಳಷ್ಟು ಉತ್ಪಾದನೆ ಹೆಚ್ಚುವರಿಯಾಗಿ ಆಗಲಿದೆ ಎಂದು ಹೇಳಿದರು.

ತನ್ನ ಮದ್ಯಮ ಪುನರ್ವಿಮರ್ಶೆಯಲ್ಲಿ ಕೇಂದ್ರ ಯೋಜನಾ ಆಯೋಗ ಪಂಚವಾರ್ಷಿಕ ಯೋಜನೆಯ ವುದ್ಯುತ್ ಉತ್ಪಾದನೆಯ ನಿಗದಿತ ಗುರಿಯನ್ನು ಶೇ.20ರಷ್ಟು ಕಡಿಮೆ ಮಾಡಿತ್ತು. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ಮಾರ್ಚ್ 2012 ರ ವೇಳೆಗೆ 'ಎಲ್ಲರಿಗೂ ವಿದ್ಯುತ್ 'ಎಂಬ ಘೋಷಣೆಗೆ ಅನುಗುಣವಾಗಿ ಗುರಿಯನ್ನು ಹೆಚ್ಚಿಸಲಾಯಿತು ಎಂದು ಅವರು ಹೇಳಿದರು.

ಈ ಯೋಜನೆಯ ಮೊದಲ ಮೂರು ವರ್ಷಗಳಲ್ಲಿ ಈ ತನಕ 22 ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಎಂದ ಅವರು 10 ನೇ ಪಂಚವಾರ್ಷಿಕ ಯೋಜನೆಯಲ್ಲಿ 21,080 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ಉತ್ಫಾದನೆ ಹೆಚ್ಚಾಗಿದ್ದು ಗುರಿ 41 ಸಾವಿರ ಮೆಗಾ ವ್ಯಾಟ್ ಗಳಷ್ಟಿತ್ತು ಎಂದರು. ಸರ್ಕಾರ ಬಚತ್ ಲ್ಯಾಂಪ್ ಯೋಜನೆಯಡಿಯಲ್ಲಿ ಕೇವಲ 15 ರುಪಾಯಿಗಳಿಗೆ ವಿದ್ಯುತ್ ಕ್ಷಮತೆಯ ಸಿಎಫ್ಎಲ್ ಬಲ್ಬ್ ಗಳನ್ನು ನೀಡುತ್ತಿದೆ ಎಂದರು. ದೇಶಾದ್ಯಂತ ಜನ ಸಾಂಪ್ರದಾಯಿಕ ಬಲ್ಬ್ ಗಳನ್ನು ಬದಲಿಸಿ ಸಿಎಫ್ಎಲ್ ಬಲ್ಬ್ ಗಳನ್ನು ಬಳಸಿದರೆ ವಾರ್ಷಿಕ 6,000 ಮೆಗಾ ವ್ಯಾಟ್ ಗಳಷ್ಟು ವಿದ್ಯುತ್ ಉಳಿತಾಯ ಆಗಲಿದೆ ಎಂdu ಸಚಿವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X