ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆನ್ ಲೈನ್ ಬ್ಯಾಂಕಿಂಗ್ ವಂಚನೆ ದ್ವಿಗುಣ

By Mahesh
|
Google Oneindia Kannada News

Online banking frauds doubled in 3 years
ನವದೆಹಲಿ, ಮೇ.5:ಬ್ಯಾಂಕುಗಳಲ್ಲಿನ ಆನ್ ಲೈನ್ ವಂಚನೆ ಪ್ರಕರಣಗಳು ಕಳೆದ ಮೂರು ವರ್ಷಗಳಲ್ಲಿ ದ್ವಿಗುಣಗೊಂಡಿವೆ ಎಂದು ಲಿಖಿತ ಉತ್ತರ ಮೂಲಕ ಕೇಂದ್ರ ಹಣಕಾಸು ರಾಜ್ಯ ಸಚಿವ ನಮೋ ನಾರಾಯಣ್ ಮೀನ ರಾಜ್ಯಸಭೆಗೆ ತಿಳಿಸಿದರು.

ಅವರು 2007 ರಲ್ಲಿ 102 , 2008 ರಲ್ಲಿ 113 ಮತ್ತು 2009 ರಲ್ಲಿ 269 ವಂಚನೆ ಪ್ರಕರಣಗಳು ದಾಖಲಾಗಿದ್ದು ಕ್ರಮವಾಗಿ ರು. 2.51, 5.53 ಹಾಗೂ 5.90 ಕೋಟಿ ರೂಪಾಯಿ ವಂಚನೆಯಾಗಿದೆ ಎಂದು ತಿಳಿಸಿದರು. 2009 ರಲ್ಲಿ ವಂಚನೆ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದಾಗಿ ತಿಳಿಸಿದ ಸಚಿವರು, ಆರ್ ಬಿಐ ಪ್ರಕಾರ ಗ್ರಾಹಕರು ತಮ್ಮ ಪಾಸ್ ವರ್ಡ್‌ಗಳನ್ನು ಬಹಿರಂಗಪಡಿಸುತ್ತಿರುವುದೇ ವಂಚನೆಗೆ ಕಾರಣ ಎಂದರು.

ಸೈಬರ್ ವಂಚನೆಗಳನ್ನು ತಡೆಯಲು ಆರ್ ಬಿಐ ಈಗಾಗಲೇ ಹಲವು ಕ್ರಮಗಳನ್ನು ಕೈಗೊಂಡಿದ್ದು ಬ್ಯಾಂಕುಗಳು ಹೆಚ್ಚಿನ ಆನ್ ಲೈನ್ ಭದ್ರತೆ ಮತ್ತು ಸುರಕ್ಷತೆ, 5000 ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ ಹಣವನ್ನು ಹಿಂಪಡೆದಾಗ ಗ್ರಾಹಕರಿಗೆ ಸಂದೇಶ ರವಾನೆ, ಮತ್ತು ಹೆಚ್ಚಿನ ಬಿಲ್ ಮೊತ್ತವನ್ನು ಪಡೆದುಕೊಂಡಾಗ ಪೋಲೀಸರಿಗೆ ದೂರು ದಾಖಲಿಸುವಂತೆ ಕೋರಿದೆ ಎಂದು ಸದನಕ್ಕೆ ಮೀನ ಅವರು ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X