ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಚೀನಾದ ಟೆಲಿಕಾಂ ಕಂಪನಿ

By Prasad
|
Google Oneindia Kannada News

Huawei to open mobile handset manufacturing unit in Chennai
ನವದೆಹಲಿ, ಮೇ 5 : ಭದ್ರತಾ ಕಾರಣದಿಂದ ಚೀನಾದ ಟೆಲಿಕಾಂ ಉಪಕರಣಗಳನ್ನು ಖರೀದಿಸದಂತೆ ಭಾರತ ಸರಕಾರ ನಿರ್ಬಂಧ ಹೇರಿರುವ ಬೆನ್ನಲ್ಲೇ ಚೀನಾದ ಪ್ರಮುಖ ಟೆಲಿಕಾಂ ಉಪಕರಣ ತಯಾರಿಕಾ ಕಂಪನಿ ಹ್ಯುವೈ 300ರಿಂದ 500 ಮಿಲಿಯನ್ ಡಾಲರ್ ಹೂಡಿಕೆಯ ಮೂಲಕ ಚೆನ್ನೈನಲ್ಲಿ ಉಪಕರಣಗಳ ತಯಾರಿಕಾ ಕಾರ್ಖಾನೆ ಸ್ಥಾಪಿಸಲು ಮುಂದಾಗಿದೆ.

ಚೀನಾದ ಹಿರಿಯ ಅಧಿಕಾರಿಗಳ ತಂಡ ಈ ಕುರಿತು ಭಾರತೀಯ ಅಧಿಕಾರಿಗಳನ್ನು ಭೇಟಿ ಮಾಡಿ ಪ್ರಸ್ತಾವನೆ ಸಲ್ಲಿಸಲು ಮುಂದಾಗಿದೆ. ಹ್ಯುವೈ ಈಗಾಗಲೇ ಚೆನ್ನೈನಲ್ಲಿ ಭೂಮಿ ಖರೀದಿಗೆ ಸ್ಥಳ ಗುರುತಿಸಿದ್ದು ಕಂಪನಿಯ ಕಾರ್ಯಕಾರಿ ಉಪಾಧ್ಯಕ್ಷ ಕ್ಸು ಝಿಉನ್ ಮತ್ತು ಏಷ್ಯಾ ವಿಭಾಗದ ಅಧ್ಯಕ್ಷ ವಾಂಗ್ ಶೆಂಗ್ಲಿ ಈ ವಾರ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಸಂಪರ್ಕ ಸಚಿವಾಲಯ ಚೀನಾದ ಉಪಕರಣಗಳ ಮೇಲೆ ಸಂಪೂರ್ಣ ನಿಷೇಧ ಹೇರಿಲ್ಲವಾದರೂ ಕಳೆದ ಫೆಬ್ರವರಿ 18ರಿಂದ ಚೀನಾದ ಉಪಕರಣಗಳ ಖರೀದಿಗೆ ಅನುಮೋದನೆ ನೀಡಿಲ್ಲ. ಆಗಸ್ಟ್ 2009ರಲ್ಲಿ ಸರಕಾರ ಚೀನಾದ ಕಂಪನಿಗಳಿಂದ ಉಪಕರಣಗಳನ್ನು ಮತ್ತು ಹಾರ್ಡ್ ವೇರ್ ಖರೀದಿಸದಂತೆ ಬಿಎಸ್ಎನ್ಎಲ್ ಗೆ ನಿರ್ಬಂಧ ಹೇರಿತ್ತು. ಅಲ್ಲದೆ ದೇಶದ ಎಲ್ಲಾ ಟೆಲಿಕಾಂ ಉಪಕರಣಗಳ ತಯಾರಕರಿಗೂ ಭಾರತೀಯ ಎಂಜಿನಿಯರ್ ಗಳನ್ನೇ ನೇಮಕ ಮಾಡಿಕೊಳ್ಳುವಂತೆ ಸೂಚಿಸಿತ್ತು.

ಚೀನಾದ ಝೆಡ್ ಟಿ ಈ ಮತ್ತು ಹ್ಯುವೈ ಕಂಪನಿಗಳಿಗೆ ಭಾರತವೇ ಎರಡನೇ ಅತೀ ದೊಡ್ಡ ಮಾರುಕಟ್ಟೆ ಆಗಿದೆ. ಝೆಡ್ ಟಿ ಈ ಕಂಪನಿಯ ಭಾರತದ ಮಾರಾಟ ಕಳೆದ ವರ್ಷ ಶೇ.50 ಏರಿಕೆ ದಾಖಲಾಗಿದೆ. ಚೀನಾದ ಉಪಕರಣಗಳು ವಿಶ್ವದಲ್ಲೇ ಕಡಿಮೆ ದರಕ್ಕೆ ಸಿಕ್ಕುತ್ತಿರುವದರಿಂದ ಟೆಲಿಕಾಂ ಕಂಪನಿಗಳು ಚೀನಾದ ಉಪಕರಣಗಳನ್ನು ಕೊಳ್ಳಲು ಆಸಕ್ತಿ ತೋರುತ್ತಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X