ಹಾಲಪ್ಪ ಪ್ರಕರಣ : ವಕೀಲರು ಏನನ್ನುತ್ತಾರೆ

Haratal Halappa
ಬೆಂಗಳೂರು, ಮೇ. 4 : ಅತ್ಯಾಚಾರ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಹರತಾಳ್ ಹಾಲಪ್ಪ ಅವರು ತಪ್ಪು ಮಾಡಿದ್ದರೆ ಶಿಕ್ಷೆ ಆಗಬೇಕು ಎನ್ನುವುದು ರಾಜ್ಯದ ಜನತೆಯೆ ಆಶಯವಾಗಿದೆ. ಆದರೆ, ಈ ಪ್ರಕರಣ ಕುರಿತು ಕ್ರಿಮಿನಲ್ ಲಾಯರ್ ಗಳು ಹೇಳುತ್ತಿರುವುದೇ ಬೇರೆ ? ಅವರು ಏನನ್ನುತ್ತಾರೆ...

ಸಚಿವ ಹಾಲಪ್ಪ ಅವರ ಅತ್ಯಾಚಾರ ಎಸಗಿದ್ದಾರೆ ಎನ್ನಲಾದ ಚಂದ್ರಾವತಿ ಅವರ ಪತಿ ವೆಂಕಟೇಶ್ ಮೂರ್ತಿ ಫೋನ್ ನಲ್ಲಿ ಚಿತ್ರೀಕರಿಸಿದ ದೃಶ್ಯಗಳನ್ನು ಟಿವಿಯಲ್ಲಿ ನೋಡಿದೆ. ಇದನ್ನು ನೋಡಿದ ತಕ್ಷಣ ಇದು ಬೋಗಸ್ ಎನ್ನಲು ಬಹಳ ಹೊತ್ತು ಹಿಡಿಯಲಿಲ್ಲ. ಹಾಲಪ್ಪ ಅವರನ್ನು ರಾಜಕೀಯವಾಗಿ ಹಣಿಯಲು ನಡೆಸಿದ ಕುತಂತ್ರ ಎಂದು ತಿಳಿಯುತ್ತದೆ. ನಾನು ಅನೇಕ ಅತ್ಯಾಚಾರ ಪ್ರಕರಣಗಳ ವಿಚಾರಣೆ ನಡೆಸಿದ್ದೇನೆ. ನನ್ನ ಅನುಭವದ ಆಧಾರದ ಮೇಲೆ ಹೇಳುವುದಾದರೆ ಇದರಲ್ಲಿ ಯಾವುದೇ ಹುರುಳಿಲ್ಲ ಎಂದು ಖ್ಯಾತ ಕ್ರಿಮಿನಲ್ ವಕೀಲ ಎಂ ಎಂ ನಾಣಯ್ಯ ಅವರ ಅಭಿಪ್ರಾಯವಾಗಿದೆ.

ಯಾವುದೇ ಘಟನೆಯ ಚಿತ್ರೀಕರಣ ಮಾಡಿರಲಿ ಅಥವಾ ದೂರವಾಣಿ ಸಂಭಾಷಣೆಯ ವಿವರ ಪಡೆದುಕೊಂಡಿರಲಿ ಅಂಥ ಪ್ರಕ್ರಿಯೆ ನಡೆದ ತಕ್ಷಣ ದಾಖಲೆಯನ್ನು ಸೀಲ್ ಮಾಡಿ ಲಕೋಟೆಯಲ್ಲಿ ಇಡಬೇಕು. ಕೂಡಲೇ ಅದನ್ನು ಕೋರ್ಟ್ ವಶಕ್ಕೆ ಒಪ್ಪಿಸಬೇಕು. ಇಲ್ಲದಿದ್ದರೆ ಅದಕ್ಕೆ ಮಾನ್ಯತೆ ಇರುವುದಿಲ್ಲ ಎನ್ನುವುದು ಮಾಜಿ ಅಡ್ವೋಕೇಟ್ ಜನರಲ್ ಬಿ ವಿ ಆಚಾರ್ಯ ಅವರ ಮಾತಾಗಿದೆ.

ಇದೊಂದು ಮ್ಯಾಚ್ ಫಿಕ್ಸಿಂಗ್ ಇದ್ದಂತೆ. ಅವರು ನೀಡಿರುವ ವಿವರ ಓದಿದರೆ ಸಾಕು ಇದು ಬಹಿರಂಗಗೊಳ್ಳುತ್ತದೆ. ವೆಂಕಟೇಶ್ ಮೂರ್ತಿ ದಂಪತಿಗಳಿಗೆ ಹಾಲಪ್ಪ ಅವರನ್ನು ಸಚಿವ ಸ್ಥಾನದಿಂದ ಇಳಿಸುವ ಏಕೈಕ ಗುರಿ ಇದ್ದಿದ್ದೇ ಆದಲ್ಲಿ ಇಷ್ಟೊಂದು ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ. ಅವರ ಪತ್ನಿಯಿಂದ ಇಂಥ ದಿನ, ಇವರಿಂದ, ಈ ರೀತಿ ಅತ್ಯಾಚಾರ ನಡೆದಿದೆ ಎಂದು ದೂರು ಕೊಟ್ಟಿದ್ದರೆ ಸಾಕಿತ್ತು ಎನ್ನುತ್ತಾರೆ ನಿತ್ಯಾನಂದನ ಪರ ವಕಾಲತ್ತು ನಡೆಸುತ್ತಿರುವ ಎಚ್ ಎಸ್ ಚಂದ್ರಮೌಳಿ ಅವರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+