ಗುರುವಾರ ನಿತ್ಯಾನಂದನಿಗೆ ಜಾಮೀನು?
ಬೆಂಗಳೂರು,
ಮೇ. 4 : ಶ್ರೀಕೃಷ್ಣನ ಜನ್ಮಸ್ಥಳದಲ್ಲಿ ಧ್ಯಾನ ಮಾಡುತ್ತಿರುವ ಕಳಂಕಿತ ದೇವಮಾನವ ಸ್ವಾಮಿ ನಿತ್ಯಾನಂದನಿಗೆ ಜಾಮೀನು ಸಿಗುವ ಎಲ್ಲ ಸಾಧ್ಯತೆ ಇವೆ. ಜಾಮೀನು ಕೋರಿ ನಿತ್ಯಾನಂದನ ವಕೀಲ ಚಂದ್ರಮೌಳಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಮೇ 6 ರಂದು ರಾಮನಗರದ ಜಿಲ್ಲಾ ಸೆಷನ್ಸ್ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆಯಲಿದೆ. id="toptextpromo">ದಂಡ
ಪ್ರಕ್ರಿಯೆ ಸಂಹಿತೆ 439ಕ ಅಡಿಯಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಗೆ ವಿರುದ್ಧವಾಗಿ ಸರಕಾರಿ ವಕೀಲ ಶ್ರೀರಾಮರೆಡ್ಡಿ ಸೋಮವಾರ ಆಕ್ಷೇಪಣಾ ಅರ್ಜಿಸಿದರು. ಕಕ್ಷಿದಾರ ಪರ ವಕೀಲ ಮಾಡಿದ ವಾದ-ವಿವಾದ ಆಲಿಸಿದ ಜಿಲ್ಲಾ ಸತ್ರ ನ್ಯಾಯಾಧೀಶ ಸಿ ಜಿ ಹುನಗುಂದ ಅವರು ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ನಿತ್ಯಾನಂದ
ಭಯೋತ್ಪಾದಕನಲ್ಲ. ಆದರೆ, ಮಾಧ್ಯಮಗಳು ಅವರನ್ನು ವಿಲನ್ ಎಂಬಂತೆ ಬಿಂಬಿಸುತ್ತಿವೆ. ಇದರಿಂದ ನಿತ್ಯಾನಂದ ಇಷ್ಟು ದಿನಗಳ ಕಾಲ ಕಾಪಾಡಿಕೊಂಡು ಬಂದಿದ್ದ ವರ್ಚಸ್ಸು ಮಣ್ಣುಪಾಲಾಗಿದೆ. ಈಗ ಸಿಐಡಿ ಪೊಲೀಸರು ತನಿಖೆಯಲ್ಲಿ ವಿಳಂಬ ಮಾಜಿ ಜೈಲುವಾಸಿಯನ್ನಾಗಿಸಿದ್ದಾರೆ. ಅವರು ಬಿಡದಿ ಮಠದಲ್ಲೇ ಇರುತ್ತಾರೆ. ಕಾಲಕಾಲಕ್ಕೆ ಬಂದು ನ್ಯಾಯಾಲಯಕ್ಕೆ ಹಾಜರಾಗುತ್ತಾರೆ. ಆದ್ದರಿಂದ ಅವರಿಗೆ ಜಾಮೀನು ನೀಡಬೇಕು ಎಂದು ಚಂದ್ರಮೌಳಿ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ, ನಿತ್ಯಾನಂದನ ವಿರುದ್ದ ಬಲವಾದ ಸಾಕ್ಷ್ಯಾಗಳ ಕೊರತೆ ಇರುವ ಹಿನ್ನೆಲೆಯಲ್ಲಿ ಅವರಿಗೆ ಗುರುವಾರ ಜಾಮೀನು ಸಿಗುವ ಲಕ್ಷಣಗಳು ಇವೆ.











Click it and Unblock the Notifications