ಜಾರ್ಖಂಡ್ ರಾಜಕೀಯದಲ್ಲಿ ಕೋಲಾಹಲ
ನವದೆಹಲಿ,
ಏ. 28 : ಮಂಗಳವಾರ ನಡೆದ ಯುಪಿಎ ಖಂಡನಾ ನಿರ್ಣಯದಲ್ಲಿ ಜಾರ್ಖಂಡ್ ಮುಖ್ಯಮಂತ್ರಿ ಶಿಬು ಸೊರೇನ್ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಪರವಾಗಿ ಮತ ಹಾಕಿರುವುದು ಜಾರ್ಖಂಡ್ ರಾಜಕೀಯದಲ್ಲಿ ತೀವ್ರ ಅಲ್ಲೋಲಕಲ್ಲೋಲ ವಾತಾವರಣ ಉಂಟಾಗಿದೆ. id="toptextpromo">ಬಿಜೆಪಿ
ಬೆಂಬಲ ಪಡೆದು ಅಧಿಕಾರಕ್ಕೆ ಬಂದಿರುವ ಶಿಬು ಸೊರೇನ್ ಕಾಂಗ್ರೆಸ್ ಪರ ವಾಲಿದ್ದು, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಬೆಂಬಲ ಪಡೆದು ಅವರ ಮಗ ಹೇಮಂತ್ ಸೊರೇನ್ ಅವರನ್ನು ಜಾರ್ಖಂಡ್ ಉಪಮುಖ್ಯಮಂತ್ರಿಯಾಗಿ ಮಾಡುವ ಸಾಧ್ಯತೆ ಇದೆ. ಶಿಬು ಸೊರೇನ್ ಅವರನ್ನು ಕೇಂದ್ರ ಮಂತ್ರಿಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಶಿಬು ಸೊರೇನ್ ಅವರನ್ನು ಕಾಂಗ್ರೆಸ್ ಪಕ್ಷ ಹಾಡಿಹೊಗಳಿದ್ದು, ಜಾತ್ಯಾತೀತ ನಾಯಕ ಎಂದು ಬಣ್ಣಿಸಿದೆ. id='are-slot-1' class='oiad oi-axt oiadv'> id='top-searched-articles'>ಶಿಬು
ಸೊರೇನ್ ಅವರ ವರ್ತನೆಗೆ ಆಶ್ಚರ್ಯ ಮತ್ತು ಖಂಡನೆ ವ್ಯಕ್ತಪಡಿಸಿರುವ ಬಿಜೆಪಿ ಅವರ ವಿರುದ್ಧ ವಾಗ್ದಾಳಿ ಆರಂಭಿಸಿದೆ. ಬಿಜೆಪಿ ಬೆಂಬಲದಿಂದ ಜಾರ್ಖಂಡ್ ನಲ್ಲಿ ಅಧಿಕಾರಕ್ಕೆ ಬರುವ ಮೂಲಕ ಮುಖ್ಯಮಂತ್ರಿ ಮಾಡಿರುವ ಬಿಜೆಪಿಗೆ ಸೊರೇನ್ ಪಾಠ ಕಲಿಸಿದ್ದಾರೆ ಎಂದು ಬಿಜೆಪಿ ವಕ್ತಾರರೊಬ್ಬರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.











Click it and Unblock the Notifications