ದೇಶದ್ರೋಹಿ ಭಾರತೀಯ ರಾಜತಂತ್ರಜ್ಞೆ ಬಂಧನ
ನವದೆಹಲಿ,
ಏ. 28 : ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಗೆ ಮಾಹಿತಿ ರವಾನೆ ಮತ್ತು ಗೂಢಚರ್ಯೆ ಆರೋಪದ ಮೇರೆಗೆ ಪಾಕಿಸ್ತಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಐಎಫ್ಎಸ್ ಮಹಿಳಾ ಅಧಿಕಾರಿ ಮಾಧುರಿ ಗುಪ್ತಾ(53) ಅವರನ್ನು ಬಂಧಿಸಲಾಗಿದೆ. id="toptextpromo">ಇಸ್ಲಾಮಾಬಾದ್
ನ ಭಾರತೀಯ ರಾಯಭಾರಿ ಕಚೇರಿಯ ಮಾಧ್ಯಮ ವಿಭಾಗದಲ್ಲಿ ಕಾರ್ಯದರ್ಶಿಯಾಗಿದ್ದ ಮಾಧುರಿ ಬಗ್ಗೆ 9 ತಿಂಗಳ ಹಿಂದೆಯೇ ಶಂಕೆ ಮೂಡಿತ್ತು. ವಿದೇಶಿ ವ್ಯವಹಾರಗಳ ಸಚಿವಾಲಯ ಮತ್ತು ಭಾರತದ ಬೇಹುಗಾರಿಕೆ ಸಂಸ್ಥೆ(ರಾ) ಈ ಬಗ್ಗೆ ತನಿಖೆ ನಡೆಸಿದಾಗ ಶಂಕೆ ನಿಜವಾಗಿದೆ. ಆಕೆ ಪಾಕಿಸ್ತಾನದ ಐಎಸ್ಐ ಮತ್ತಿತರ ಸಂಸ್ಥೆಗಳಿಗೆ ಭಾರತದ ಪ್ರಮುಖ ಮಾಹಿತಿಗಳನ್ನು ರವಾನಿಸುತ್ತಿದ್ದಳು ಎಂದು ಕೇಂದ್ರ ಗೃಹ ಕಾರ್ಯದರ್ಶಿ ಜಿ ಕೆ ಪಿಳ್ಳೈ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಥಿಂಪುವಿನಲ್ಲಿ
ನಡೆಯುವ ಸಾರ್ಕ್ ಶೃಂಗಸಭೆಯಲ್ಲಿ ಅವರ ಸೇವೆ ಅಗತ್ಯ ಎಂದು ಉಪಾಯದಿಂದ ಅವರನ್ನು ದಿಲ್ಲಿಗೆ ಕರೆಸಿಕೊಳ್ಳಲಾಗಿತ್ತು. ಕಳೆದ ವಾರ ಆಕೆಯ ಪೂರ್ವ ದಿಲ್ಲಿಯ ನಿವಾಸದಲ್ಲಿ ಬಂಧಿಸಲಾಯಿತು. ಸ್ಥಳೀಯ ನ್ಯಾಯಾಲಯ ಆಕೆಯನ್ನು 10 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಆಕೆ ತನ್ನ ಕೃತ್ಯ ಒಪ್ಪಿಕೊಂಡಿದ್ದಾಳೆ ಎಂದು ಮೂಲಗಳು ತಿಳಿಸಿವೆ.











Click it and Unblock the Notifications