ಸಿಇಟಿ 2010 : ಗಣಿತ ಪೇಪರ್ ಕಷ್ಟ ಕಷ್ಟ!

CET 2010
ಬೆಂಗಳೂರು, ಏ. 28 : ವೈದ್ಯರು, ಇಂಜಿನಿಯರ್ ಗಳಾಗುವ ಕನಸಿನ ಬೆನ್ನೇರಿ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ2010) ಎದುರಿಸಿದ ಬಹುತೇಕ ವಿದ್ಯಾರ್ಥಿಗಳ ಮುಖ ಪರೀಕ್ಷೆ ಮುಗಿಸಿ ಹೊರಬಂದ ನಂತರ ಸಪ್ಪೆ ಸಪ್ಪೆಯಾಗಿತ್ತು. ವಾರ್ಷಿಕ ಪರೀಕ್ಷೆಯಲ್ಲಿ ರಸಾಯನಶಾಸ್ತ್ರ ವಿದ್ಯಾರ್ಥಿಗಳ ಜೀವಹಿಂಡಿದ್ದರೆ, ಇಂದು ನಡೆದ ಸಿಇಟಿಯ ಗಣಿತ ಪರೀಕ್ಷೆಯಲ್ಲಿ ಬರೆಯಲು ವಿದ್ಯಾರ್ಥಿಗಳು ಒದ್ದಾಡಿದ ಪ್ರಸಂಗ ನಡೆದಿದೆ.

ಬೆಳಗ್ಗೆ ನಡೆದ ಜೀವಶಾಸ್ತ್ರ ಮತ್ತು ಮಧ್ಯಾಹ್ನ ನಡೆದ ಗಣಿತ ಪರೀಕ್ಷೆಗಳು ವಿದ್ಯಾರ್ಥಿಗಳ ಪಾಲಿಗೆ ಸಿಂಹಸ್ವಪ್ನವಾಗಿ ಪರಿಣಮಿಸಿವೆ. ಪ್ರತಿ ವರ್ಷದಂತೆ ಈ ಸಲ ಪ್ರಶ್ನೆ ಪತ್ರಿಕೆಯನ್ನು ತೆಗೆಯಲಾಗಿಲ್ಲ ಎನ್ನುವುದು ವಿದ್ಯಾರ್ಥಿಗಳು ದೂರು. ಪ್ರಶ್ನೆಗೆ ನೀಡಿರುವ ಆಯ್ಕೆ ಉತ್ತರಗಳು ತೀವ್ರ ಗೊಂದಲಮಯವಾಗಿದ್ದವು. ಇರುವ ನಾಲ್ಕು ಆಯ್ಕೆಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದೇ ದೊಡ್ಡ ಪ್ರಶ್ನೆಯಾಗಿತ್ತು ಎನ್ನುವುದು ವಿದ್ಯಾರ್ಥಿಗಳ ಗೋಳಾಗಿದೆ.

ನಾನು ಕನಿಷ್ಟ ಎಂದರೂ ಕಳೆದ 5 ವರ್ಷಗಳ ಸಿಇಟಿ ಪ್ರಶ್ನೆ ಪತ್ರಿಕೆಯನ್ನು ಅಭ್ಯಾಸ ಮಾಡಿ ಸಂಪೂರ್ಣ ತಯಾರಿಯಾಗಿ ಪರೀಕ್ಷೆ ಎದುರಿಸಿದ್ದೆ. ಆದರೆ, ನನಗೆ ಈ ಸಲದ ಪ್ರಶ್ನೆ ಪತ್ರಿಕೆ ನೋಡಿ ಏನು ಮಾಡಬೇಕು ಎನ್ನುವುದೇ ತೋಚಲಿಲ್ಲ. ವರ್ಷ ಪೂರ್ತಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಓದಿರುವ ನನಗೆ ಈ ಗತಿಯಾದರೆ, ಉಳಿದವರು ಗತಿ ಹೇಗೆ ? ಒಟ್ಟಿನಲ್ಲಿ ಹೇಳುವುದಾದರೆ, ಜೀವಶಾಸ್ತ್ರ ಇದ್ದುದರಲ್ಲಿ ಓಕೆ, ಗಣಿತ ಪರೀಕ್ಷೆಯಂತೂ ಟಫ್ ಆಗಿತ್ತು ಎನ್ನುತ್ತಾರೆ ಧಾರವಾಡ ಜೆಎಸ್ಎಸ್ ಕಾಲೇಜಿನ ವಿದ್ಯಾರ್ಥಿನಿ ಕವಿತಾ.

ನಾನು ವೆಕೇಷನ್ ಹೋಗಿ ಹಳೆಯ ಎಲ್ಲ ಪ್ರಶ್ನೆ ಪತ್ರಿಕೆಯನ್ನೂ ರೆಫರ್ ಮಾಡಿದರೂ ನನಗೆ ಈ ಸಲ ಸಿಇಟಿ ಎದುರಿಸುವುದು ತುಂಬಾ ಕಷ್ಟವಾಯಿತು. ಸಾಕಷ್ಟು ತಯಾರಿ ನಡೆಸಿದ ನನಗೆ ತುಂಬಾ ನಿರಾಶೆಯಾಗಿದೆ. ಗಣಿತ ಪ್ರಶ್ನೆ ಪತ್ರಿಕೆಯಂತೂ ನಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರಶ್ನೆ ಪತ್ರಿಕೆಯಾಗಿತ್ತು. ಪ್ರತಿ ವರ್ಷದ ಪ್ರಶ್ನೆ ಪತ್ರಿಕೆಯಾಗಿದ್ದರೆ ಯಾವ ಸಮಸ್ಯೆಯೂ ಇರುತ್ತಿರಲಿಲ್ಲ. ಆದರೆ, ಈ ಸಲದ ಪ್ರಶ್ನೆ ಪತ್ರಿಕೆ ಬೇರೆ ತರನಾಗಿದೆ ಎನ್ನುವುದು ನ್ಯಾಷನಲ್ ಹೈಸ್ಕೂಲ್ ನ ಮಹೇಶ್ ನ ದೂರಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+