ದೇಶ ಒಡೆಯಲು ಸಾವರಕರ್, ಜಿನ್ನಾ ಕಾರಣ
ನವದೆಹಲಿ,
ಏ. 25 : ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ವೀರ ಸಾವರಕರ್ ಹಾಗೂ ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ದೇಶ ಇಬ್ಭಾಗವಾಗಲು ಕಾರಣ ಎಂದು ರಾಜ್ಯಸಭಾ ಸದಸ್ಯ ಮಣಿ ಶಂಕರ್ ಅಯ್ಯರ್ ಆರೋಪಿಸಿದ್ದಾರೆ. id="toptextpromo">ದೆಹಲಿಯ
ಕಾಂಗ್ರೆಸ್ ಘಟಕದ ಸಮ್ಮೇಳನದಲ್ಲಿ ಆಯೋಜಿಸಿದ್ದ ಕೋಮು ಸೌಹಾರ್ದತೆ ಮತ್ತು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ವಿಷಯದ ಕುರಿತು ಮಾತನಾಡಿದ ಅವರು, ವೀರ ಸಾವರ್ಕರ್ ಅವರು ಮೊದಲಿನಿಂದಲೂ ದ್ವಿರಾಷ್ಟ್ರ ಸಿದ್ದಾಂತದ ಪರವಾಗಿಯೇ ಇದ್ದರು. ಹಾಗಾಗಿಯೇ ಅವರು ಹಿಂದೂ ರಾಷ್ಟ್ರವಾಗಲೇಬೇಕೆಂದು ಹಠ ಹಿಡಿದಿದ್ದರು. ಆ ಕಾರಣಕ್ಕಾಗಿಯೇ ಜಿನ್ನಾ ಅವರ ಪ್ರತ್ಯೇಕ ಪಾಕಿಸ್ತಾನದ ಬೇಡಿಕೆಯನ್ನು ಬೆಂಬಲಿಸಿದ್ದರು ಎಂದರು. id='are-slot-1' class='oiad oi-axt oiadv'> id='top-searched-articles'>ಆರ್ಎಸ್ಎಸ್
ಮತ್ತು ಬಿಜೆಪಿ ಸಾವರ್ಕರ್ ಅವರ ಕೂಸು. ಒಂದು ವೇಳೆ ಭಾರತ ಹಿಂದೂ ರಾಷ್ಟ್ರವಾಗಿ ರೂಪುಗೊಂಡಿದ್ದರೆ ಶೈವ ಮತ್ತು ವೈಷ್ಣವ ಪಂಥೀಯ ಘರ್ಷಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತಿತ್ತು. ಇದು ಪಾಕಿಸ್ತಾನದಲ್ಲಿನ ಶಿಯಾ ಮತ್ತು ಸುನ್ನಿ ಮುಸ್ಲಿಮರ ನಡುವಿನ ಘರ್ಷಣೆಯಂತೆಯೇ ನಡೆಯುತ್ತಿತ್ತು ಎಂದು ಅಯ್ಯರ್ ವ್ಯಾಖ್ಯಾನಿಸಿದರು.











Click it and Unblock the Notifications