ಪಾತಕಿ ಬಬ್ಲು ಶ್ರೀವಾಸ್ತವ ಖುಲಾಸೆ
ಹುಬ್ಬಳ್ಳಿ,
ಏ. 25 : ಉದ್ಯಮಿ ಆರ್ ಎನ್ ಶೆಟ್ಟಿ ಅವರ ಪುತ್ರ ಸತೀಶ್ ಶೆಟ್ಟಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳ ಕೊರತೆಯಿಂದ ಭೂಗತ ಪಾತಕಿ ಬಬ್ಲು ಶ್ರೀವಾಸ್ತವ (ಓಂಪ್ರಕಾಶ) ಖುಲಾಸೆಗೊಂಡಿದ್ದಾನೆ. ವಿಚಾರಣೆಗೆ ನಗರದ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಪೊಲೀಸ್ ಬಂದೋಬಸ್ತ್‌ನಲ್ಲಿ ಶನಿವಾರ ಹಾಜರುಪಡಿಸಲಾಗಿತ್ತು. id="toptextpromo">ಉತ್ತರ
ಪ್ರದೇಶದ ರಾಯ್‌ಬರೇಲಿ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಬಬ್ಲು, ಸತೀಶ ಶೆಟ್ಟಿ ಅಪಹರಣ ಯತ್ನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು 1998ರಲ್ಲಿ ಗೋಕುಲ ರಸ್ತೆ ಠಾಣೆಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಪ್ರಕರಣದ ವಿಚಾರಣೆಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಶನಿವಾರ ಆರೋಪಿಯನ್ನು ಉತ್ತರ ಪ್ರದೇಶ ಪೊಲೀಸರು ನ್ಯಾಯಾಧೀಶ ಬಿಎಸ್ ಗೌಡ ಅವರ ಮುಂದೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಲಯ ಸಾಕ್ಷಿಗಳ ಕೊರತೆಯಿಂದಾಗಿ ಬಬ್ಲೂನನ್ನು ಆರೋಪ ಮುಕ್ತ ಎಂದು ಘೋಷಿಸಿತು. id='are-slot-1' class='oiad oi-axt oiadv'> id='top-searched-articles'>ಪ್ರಕರಣದ
ಪ್ರಮುಖ ಆರೋಪಿಗಳೆನ್ನಲಾದ ಕೇರಳ ಮೂಲದ ನಾಸೀರ್ ಅಹ್ಮದ್, ನಾಸೀರ್ ಅಬ್ದುಲ್ ಸಾಕ್ಷ್ಯಾಧಾರಗಳ ಕೊರತೆಯಿಂದ ಈಗಾಗಲೇ ಖುಲಾಸೆಗೊಂಡಿದ್ದಾರೆ.











Click it and Unblock the Notifications