ಕಾರ್ಯಾಚರಣೆ ನಡೆಸಿದ್ರೆ ಮತ್ತೆ ರಕ್ತಪಾತ

Maoists
ಪೆರುಲಿಯಾ(ಪಶ್ಚಿಮ ಬಂಗಾಲ), ಏ. 12 : ಕೇಂದ್ರ ಸರಕಾರ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿದರೆ ದಂತೇವಾಡ ಮಾದರಿಯಲ್ಲಿ ಮತ್ತಷ್ಟು ಹಿಂಸಾಚಾರ ನಡೆಸಲಾಗುವುದು ಎಂದು ಸಿಪಿಐ ಮಾವೋವಾದಿಗಳು ಎಚ್ಚರಿಕೆ ನೀಡಿದ್ದಾರೆ.

ಕಾರ್ಯಾಚರಣೆ ನಿಲ್ಲಿಸದಿದ್ದರೆ ಪರಿಣಾಮ ಭೀಕರವಾಗಿರುತ್ತದೆ ಎಂದು ಇಲ್ಲಿನ ಪತ್ರಿಕಾ ಕಚೇರಿಗಳಿಗೆ ಫ್ಯಾಕ್ಸ್ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ಮೃತ ಯೋಧರ ಕುಟುಂಬಗಳಿಗೆ ಸಂತಾಪ ಸೂಚಿಸಿರುವ ಸಿಪಿಐ ಮಾವೋವಾದಿಗಳು ಅವರಿಗೆ ಪರಿಹಾರ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.

ಜನರು ಮುಂದೆ ಬಂದು ಅವರಿಗೆ ಆರ್ಥಿಕ ನೆರವು ನೀಡಬೇಕು. ತಮ್ಮ ಹೋರಾಟವನ್ನು ಜನರು ಬೆಂಬಲಿಸಬೇಕು ಹಾಗೂ ಭದ್ರತಾ ಪಡೆಗೆ ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ಮಾವೋವಾದಿಗಳು ಹೇಳಿದ್ದಾರೆ. ದಂತೇವಾಡ ದಾಳಿ ತನಿಖೆಗೆ ನೇಮಕಗೊಂಡಿರುವ ಏಕಸದಸ್ಯ ಸಮಿತಿಯು ಈಗಾಗಲೇ ತನಿಖೆ ಆರಂಭಿಸಿದ್ದು, ಮುಂದಿನ ವಾರ ದಂತೇವಾಡ ಭೇಟಿ ನೀಡಲಿದೆ.

ಈ ಮಧ್ಯೆ ದಾಳಿಗೆ ಕಾರಣರಾದ ನಕ್ಸಲ್ ಮುಖಂಡರಿಗಾಗಿ ವ್ಯಾಪಕ ಶೋಧ ನಡೆಯುತ್ತಿದೆ. ಗಡಿ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದ ರಾಮ್ ಮೋಹನ್ ನೇತೃತ್ವದ ಈ ಸಮಿತಿಯ ದಾಳಿಯಲ್ಲಿ ಗಾಯಗೊಂಡ ಯೋಧರು ಹಾಗೂ ಅಧಿಕಾರಿಗಳ ಜೊತೆ ಮಾತುಕತೆ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+