ಗುಜರಾತ್ ನಿಂದ ವಿದ್ಯುತ್ ಖರೀದಿ, ಸಿಎಂ

ನಗರದ ಲಲಿತ್ ಮಹಲ್ ಹೆಲಿಪ್ಯಾಡ್ ನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಯಚೂರು ಶಾಖೋತ್ಪನ್ನ ವಿದ್ಯುತ್ ಘಟಕ ಮತ್ತೆ ಆರಂಭವಾಗಿದೆ ಎಂದರು. ರಾಯಚೂರು ಘಟಕದಲ್ಲಿ 2ಲಕ್ಷ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ರೈಲು ಹಳಿ ತಪ್ಪಿದ್ದರಿಂದ ವಿದ್ಯುತ್ ವ್ಯತ್ಯಯ ಉಂಟಾಗಿದೆ. 3ಮತ್ತು 4 ನೇ ಘಟಕಗಳು ಎರಡು ದಿನ ಮಾತ್ರ ಸ್ಥಗಿತಗೊಂಡಿದ್ದವು. ಗುರುವಾರದಿಂದ ಮತ್ತೆ ಆರಂಭವಾಗಿವೆ ಎಂದು ಅವರು ವಿವರಿಸಿದರು.












Click it and Unblock the Notifications