ದಂಡೇವಾಡ ನರಮೇಧದಲ್ಲಿ ಕನ್ನಡಿಗ ಹತ
ಹಾಸನ,
ಏ. 8 : ಛತ್ತೀಸ್ ಗಢ್ ಬುಧವಾರ ನಕ್ಸಲ್ ನರಮೇಧದಲ್ಲಿ ಹತರಾದ 80 ಯೋಧರಲ್ಲಿ ಹಾಸನ ತಾಲ್ಲೂಕಿನ ಚಿಕ್ಕಬಸವನಹಳ್ಳಿಯ ಸಿಕೆ ಶಿವಪ್ಪ (40) ಸೇರಿದ್ದಾರೆ. id="toptextpromo">ಪಾರ್ಥೀವ
ಶರೀರ ಇಂದು ಹಾಸನಕ್ಕೆ ಬರಲಿದೆ. 1991 ರಲ್ಲಿ ಸಿಆರ್ ಪಿಎಫ್ ಸೇರಿದ್ದ ಶಿವಪ್ಪ 2011ರಲ್ಲಿ ನಿವೃತ್ತರಾಗಲಿದ್ದರು. ಪ್ರತಿ ಯುಗಾದಿಗೆ ಬರುತ್ತಿದ್ದ ಅವರು, ಈ ಸಲದ ಯುಗಾದಿ ಬಂದಿರಲಿಲ್ಲ. ಮೇನಲ್ಲಿ ಅಕ್ಕನ ಮಗಳ ಮದುವೆಗೆ ಬರುವವರಿದ್ದರು. ಇಂದು ಬೆಳಗ್ಗೆ ಶಿವಪ್ಪ ಹತ್ಯೆ ವಿಷಯ ಕುಟುಂಬದವರಿಗೆ ತಲುಪಿತು. ಪತ್ನಿ ಲಾವಣ್ಯ ಮಗ ಚೇತನ, ಮೂವರು ಸಹೋದರಿಯರು, ಮೂವರು ಸಹೋದರರನ್ನು ಅಗಲಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಮೃತದೇಹ ಈಗಾಗಲೇ ದೆಹಲಿ ತಲುಪಿದ್ದು, ಇಂದು ವಿಶೇಷ ವಿಮಾನದ ಮೂಲಕ ಇಂದು ಬೆಂಗಳೂರಿಗೆ ತರಲಾಗುವುದು. ಅವರ ಸ್ವಗ್ರಾಮ ಚಿಕ್ಕಬಸವನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ.











Click it and Unblock the Notifications