ಭಾನಾಪುರದಲ್ಲೂ ಹಂಪಿ ಎಕ್ಸ್‌ಪ್ರೆಸ್ ನಿಲುಗಡೆ

ಭಾನಾಪುರ ರೈಲು ನಿಲ್ದಾಣದಲ್ಲಿ ಹಂಪಿ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ಕಲ್ಪಿಸಬೇಕೆಂದು ರೈಲು ಹೋರಾಟ ಕ್ರಿಯಾ ಸಮಿತಿಯೊಂದಿಗೆ ಖುದ್ದಾಗಿ ತೆರಳಿ ಕಳೆದ ಫೆ. 12 ರಂದು ಹುಬ್ಬಳ್ಳಿಯ ದಕ್ಷಿಣ ಮಧ್ಯ ರೈಲ್ವೆ ಇಲಾಖೆ ಪ್ರಧಾನ ವ್ಯವಸ್ಥಾಪಕ ಕುಲದೀಪ್ ಚತುರ್ವೇದಿ ಅವರಲ್ಲಿ ಸಲ್ಲಿಸಿದ ಮನವಿಗೆ ಇದೀಗ ಸ್ಪಂದನೆ ದೊರೆತಿದೆ. ಭಾನಾಪುರದಲ್ಲಿ ರೈಲು ನಿಲುಗಡೆಯಿಂದಾಗಿ ಕುಕನೂರು, ಬನ್ನಿಕೊಪ್ಪ, ಮಸಬಹಂಚಿನಾಳ, ತಳಕಲ್ ಹಾಗೂ ಇನ್ನಿತರೆ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ ಎಂದು ಸಂಸದ ಶಿವರಾಮಗೌಡ ಅವರು ತಿಳಿಸಿದ್ದಾರೆ.












Click it and Unblock the Notifications