ಒಬ್ಬರನ್ನು ಒಬ್ಬರು ಬೈಯುವುದೇ ಪ್ರಜಾಪ್ರಭುತ್ವ : ಭೈರಪ್ಪ
ಬೆಂಗಳೂರು,
ಏ. 8 : ಒಬ್ಬನೊಬ್ಬರು ಬೈಯುವುದೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಾಗಿದೆ ಎಂದು ಸಾಹಿತಿ ಎಸ್ ಎಲ್ ಭೈರಪ್ಪ ಆತಂಕ ವ್ಯಕ್ತಪಡಿಸಿದ್ದಾರೆ. ಸುಂದರ ಪ್ರಕಾಶನ ನಗರದ ಸಂಸ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಸಾಹಿತಿ ಎಸ್ ಎಲ್ ಭೈರಪ್ಪ ಅವರ ಗೃಹಭಂಗ, ವಂಶವೃಕ್ಷ, ದಾಟು ಹಾಗೂ ಪರ್ವ ಕಾದಂಬರಿಗಳ ವಿಮರ್ಶಾ ಲೇಖನಗಳ ಸಂಗ್ರಹ "ಭೈರಪ್ಪನವರ ಮಹಾನ್ ಕೃತಿಗಳು" ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. id="toptextpromo"> ಚುನಾವಣೆ ಮುಗಿದರೂ ಪತ್ರಿಕೆಗಳಲ್ಲಿ ಬೈಗುಳಗಳೇ ರಾರಾಜಿಸುತ್ತಿವೆ. ಮತದಾರರು ಬೇಕಾದವರಿಗೆ ಮತ ಹಾಕುತ್ತಾರೆ. ಹೀಗಿರುವಾಗ ನಮ್ಮರಾಜಕೀಯ ಪಕ್ಷಗಳು ಸೋಲನ್ನು ಏಕೆ ಒಪ್ಪಿಕೊಳ್ಳುವುದಿಲ್ಲ ಎಂದು ಅವರು ಪ್ರಶ್ನಿಸಿದರು. ಪ್ರಜಾಪ್ರಭುತ್ವ ಗುಣಾತ್ಮಕವಾಗಿ ಕೆಲಸ ಮಾಡಬೇಕೆಂದರೆ ಮಾತು ಕಡಿಮೆ ಮಾಡಿ, ಕೆಲಸದತ್ತ ಗಮನ ಹರಿಸಬೇಕು. ಇದು ರಾಜಕೀಯ ಮಾತ್ರ ಸಾಹಿತ್ಯ ಕ್ಷೇತ್ರಕ್ಕೂ ಅನ್ವಯಿಸುತ್ತದೆ. id='are-slot-1' class='oiad oi-axt oiadv'> id='top-searched-articles'> ಅಧಿಕಾರವಿಲ್ಲದಿದ್ದರೂ ಸೇವೆ ಸಲ್ಲಿಸಬಹುದು. ಇದಕ್ಕೆ ಸೇವಾ ಮನೋಭಾವ ಬೇಕು. ಸೇವಾ ಮನೋಭಾವವುಳ್ಳವರು ಮಾತ್ರ ಅಧಿಕಾರದಲ್ಲಿರಲು ಅರ್ಹರು ಎಂದು ಅವರು ಅಭಿಪ್ರಾಯಪಟ್ಟರು.











Click it and Unblock the Notifications