ಆಯೇಷಾಗೆ ತಲಾಖ್ ತಲಾಖ್ ತಲಾಖ್
ಹೈದರಾಬಾದ್
, ಏ.7:ಕಳೆದ ಕೆಲವು ದಿನಗಳಿಂದ ತನಗೂ ಮತ್ತು ಆಯೇಷಾ ಸಿದ್ದಿಕಿಗೂ ಯಾವುದೇ ಸಂಬಂಧವಿಲ್ಲ ಎನ್ನುತ್ತಿದ್ದ ಪಾಕ್ ಕ್ರಿಕೆಟಿಗ ಶೊಯೇಬ್ ಮಲಿಕ್, ಆಕೆಯೊಂದಿಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿ ವಿವಾಹ ವಿಚ್ಛೇದನ ನೀಡಿದ್ದಾರೆ. ಈ ಮೂಲಕ ಜನತೆಯನ್ನು ತಪ್ಪುದಾರಿಗೆ ತಳ್ಳುವ ಹೇಳಿಕೆ ನೀಡುತ್ತಿದ್ದುದನ್ನು ಆತ ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. id="toptextpromo">ಆಂಧ್ರಪ್ರದೇಶದ
ಅಲ್ಪ ಸಂಖ್ಯಾತ ಖಾತೆ ಸಚಿವ ಖಲೀದ್ ರಷೀದ್ ಖಾನ್ ಮಧ್ಯಸ್ಥಿಕೆಯಲ್ಲಿ ಎರಡೂ ಕುಟುಂಬದ ಸದಸ್ಯರು ನಿನ್ನೆ ತಡ ರಾತ್ರಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಮಧ್ಯಸ್ಥಿಕೆಯಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್ ಇಕ್ರಾಂ ಖಲೀಂ, ಮಲಿಕ್ ಈಗಾಗಲೇ ವಿಚ್ಛೇದನ ಪತ್ರಕ್ಕೆ ತಮ್ಮ ಸಹಿಹಾಕಿದ್ದಾರೆಂದು ತಿಳಿಸಿದ್ದಾರೆ. ಸಮುದಾಯದ ಗೌರವ ಕಾಪಾಡಿಕೊಳ್ಳಲು ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಮಧ್ಯಸ್ಥಿಕೆಯ ನಂತರ ಆಯೆಷಾ ಮಲಿಕ್ ವಿರುದ್ದದ ಕ್ರಿಮಿನಲ್ ಕೇಸ್ ಅನ್ನು ಹಿಂದಕ್ಕೆ ಪಡೆಯಲಿದ್ದಾರೆ. ಮಲಿಕ್ ಮತ್ತು ಆಯೇಷಾ ಕುಟುಂಬದ ನಡುವಣ ಎಲ್ಲಾ ವಿವಾದಗಳು ಈಗ ಬಗೆ ಹರಿದಿದೆ ಎಂದು ಖಲೀಂ ಹೇಳಿಕೆ ನೀಡಿದ್ದಾರೆ.











Click it and Unblock the Notifications