ಏ.12ರಿಂದ ಬಿಎಸ್ಸೆನ್ನೆಲ್ ಮುಷ್ಕರ
ನವದೆಹಲಿ,
ಏ.6. ವೇತನ ಪರಿಷ್ಕರಣೆಗೆ ಆಗ್ರಹಿಸಿ ಬಿಎಸ್ಸೆನ್ನೆಲ್ ಕಾರ್ಮಿಕರ ಒಕ್ಕೂಟ ಏ.12ರಿಂದಅನಿರ್ದಿಷ್ಟಾವಧಿ ಮುಷ್ಕರ ಹೂಡುವುದಾಗಿ ಸೋಮವಾರ ಪ್ರಕಟಿಸಿದೆ. ಭಾರತ್ ಸಂಚಾರ್ ಭವನ್ ಎದುರು ಮುಷ್ಕರ ಆರಂಭಿಸಲು ಬಿಎಸ್‌ಎನ್ಎಲ್ ಕಾರ್ಮಿಕರ ಒಕ್ಕೂಟ ನಿರ್ಧರಿಸಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿಎಎನ್ ನಂಬೂದಿರಿ ಹೇಳಿದರು. id="toptextpromo">ವೇತನ
ಪರಿಷ್ಕರಣೆ ಜಾರಿ, 2007 ರ ಜನವರಿ 1ರಿಂದ ಬಾಕಿ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಬಿಎಸ್ಸೆನ್ನೆಲ್ ಕಾರ್ಮಿಕ ಒಕ್ಕೂಟ ಒತ್ತಾಯಿಸಿದೆ. ಕಂಪನಿಯ 2.5 ಲಕ್ಷ ಸಿಬ್ಬಂದಿಗೆ ವೇತನ ವಿತರಣೆಯಲ್ಲಿ ಉಂಟಾಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೇಂದ್ರ
ಟೆಲಿಕಾಂ ವಿಭಾಗ ಕೂಡಲೇ ನೌಕರಿಗೆ ನ್ಯಾಯ ಒದಗಿಸಬೇಕು.ಬೇಡಿಕೆ ಈಡೇರದಿದ್ದರೆ ಎಲ್ಲಾ ರಾಜ್ಯ ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ನಂಬೂದಿರಿ ಹೇಳಿದರು.











Click it and Unblock the Notifications