ಬಡಮಕ್ಕಳಿಗೆ ಶಾಲೆಯಲ್ಲಿ ಸೀಟು ಬಿಟ್ಟುಕೊಡಿ

25% seets should be reserved for poor children in schools
ನವದೆಹಲಿ, ಏ.1: ಪ್ರಾಥಮಿಕ ಶಿಕ್ಷಣ ನೀಡುವ ಖಾಸಗಿ ಶಾಲೆಗಳು ಆರ್ಥಿಕವಾಗಿ ಹಿಂದುಳಿದವರಿಗೆ ಪ್ರತಿಶತ 25ರಷ್ಟು ಪ್ರವೇಶಾವಕಾಶವನ್ನು ಮೀಸಲಿಡಬೇಕೆಂದು ಕೇಂದ್ರ ಮಾನವ ಸಂಪನ್ಮೂಲ ಸಚಿಲ ಕಪಿಲ್ ಸಿಬಾಲ್ ಹೇಳಿದ್ದಾರೆ. ತಮ್ಮ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳ ಪೈಕಿ ಕಾಲು ಭಾಗವನ್ನು ಹಿಂದುಳಿದವರಿಗೆ ಮೀಸಲಿರಿಸಬೇಕಾಗಿರುವುದು ಖಾಸಗಿಯವರ ಹೊಣೆಯಾಗಿರುತ್ತದೆ. ಇದು 1ರಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ.

ಗುರುವಾರ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು, ಈ ನಿಯಮವನ್ನು ಮೀರುವ ಶಾಲೆಗಳು ಶಿಕ್ಷಣದ ಹಕ್ಕು ಪ್ರಕಾರ ಶಿಕ್ಷಾರ್ಹರಾಗುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ. 'ಇದು ಕಾನೂನಾ' ಎಂಬ ಪ್ರಶ್ನೆಗೆ ಉತ್ತರಿಸಿ ಅವರು 'ಹೌದು, ಇದು ಶಾಸನ ವಿಧಿಸಿದ ಎಚ್ಚರಿಕೆ' ಎಂದು ಸ್ಪಷ್ಟಪಡಿಸಿದು. ಕಾನೂನು ಉಲ್ಲಂಘನೆ ಮಾಡುವ ಶಾಲೆಗಳು ಶಿಕ್ಷೆಗೆ ಗುರಿಯಾಗುತ್ತವೆ ಎಂದು ಅವರು ಒತ್ತಿ ಹೇಳಿದರು.

ಈ ಕಾನೂನು ಅನುದಾನಿತ ಮತ್ತು ಅನುದಾನ ಪಡೆಯದ ಶಾಲೆಗಳಿಗೆ ಏಕಕಾಲಕ್ಕೆ ಅನ್ವಯಿಸುತ್ತದೆ. ಅದೇ ರೀತಿ ಅಲ್ಪಸಂಖ್ಯಾತರು ನಡೆಸುವ ಶಾಲೆಗಳಿಗೂ ಅನ್ವಯವಾಗುತ್ತದೆ ಎಂದು ಕಪಿಲ್ ತಿಳಿಸಿದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ಶಿಕ್ಷಣದ ಹಕ್ಕು (RTE) ಇಂದಿನಿಂದ, ಅಂದರೆ ಗುರುವಾರ ಏಪ್ರಿಲ್ 1ರಿಂದ ಮೂಲಭೂತ ಹಕ್ಕಾಗಿ ಜಾರಿಯಾಗಿದೆ.

ಈ ಕಾಯ್ದೆಯ ಜಾರಿಯಿಂದಾಗಿ ದೇಶದಲ್ಲಿರುವ 6ರಿಂದ 14 ವರ್ಷದೊಳಗಿರುವ ಎಲ್ಲ ಮಕ್ಕಳಿಗೆ ಉಚಿತ ಶಿಕ್ಷಣ ಲಭಿಸಲಿದೆ. ರಾಷ್ಟ್ರದಲ್ಲಿ ಈ ವಯಸ್ಸಿನ 22 ಕೋಟಿ ಮಕ್ಕಳಿದ್ದು, ಮಕ್ಕಳಿಗೆ ಶಿಕ್ಷಣ ದೊರಕಿಸುವ ಜವಾಬ್ದಾರಿ ಆಯಾ ರಾಜ್ಯ ಸರಕಾರಗಳ ಮೇಲಿದೆ. ಮಕ್ಕಳಿಗೆ ಕಡ್ಡಾಯ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ ಎಲ್ಲ ರಾಜ್ಯಗಳು ಪಕ್ಷಭೇದ ಮರೆತು ಕೇಂದ್ರದೊಡನೆ ಕೈಜೋಡಿಸಬೇಕು ಎಂದು ಪ್ರಧಾನಿ ಮನಮೋಹನ ಸಿಂಗ್ ಅವರು ಕರೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+