ಎಂಎಫ್ ಹುಸೇನ್ ಗೆ ಭಾರತರತ್ನ ನೀಡಿ!
ಮುಂಬೈ,
ಏ. 1 : ಭಾರತವನ್ನು ತೊರೆದು ಕತಾರ್ ಪೌರತ್ವ ಪಡೆದಿಕೊಂಡಿರುವ ವಿವಾದಿತ ಕಲಾವಿದ ಎಂಎಫ್ ಹುಸೇನ್ ಅವರಿಗೆ ಭಾರತದ ಸರ್ವಶ್ರೇಷ್ಠ ಪ್ರಶಸ್ತಿ ಎನಿಸಿರುವ ಭಾರತರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂದು ಮುಂಬೈನ ಶರೀಫರೊಬ್ಬರು ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ. id="toptextpromo"> ನಗರದ ಮರೀನ್ ಡ್ರೈವ್ ಪ್ರದೇಶದಲ್ಲಿ ಈ ಸಂಬಂಧ ಭಿತ್ತಿಪತ್ರವೊಂದನ್ನು ಹಾಕಿರುವ ಮುಂಬೈಯ ಶರೀಫ್ ನಾನಾ ಚುಡಾಸಮಾ, ಎಂಎಫ್ ಹುಸೇನ್ ಮತ್ತು ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹುಸೇನ್ ನಮ್ಮ ಆಸ್ತಿ. ನಾವು ಜಾತ್ಯತೀತ ರಾಷ್ಟ್ರದವರು ಎಂದು ಹೇಳುತ್ತೇವೆ. ಹಾಗಾಗಿ ಅವರ ವಾಪಸಾತಿಗೆ ಅವಕಾಶ ನೀಡಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಶರೀಫ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಹುಸೇನ್ ಅವರ ವಿವಾದದ ಬಗ್ಗೆ ಹೆಚ್ಚೇನು ಮಾತನಾಡದ ಶರೀಫ್, ಅದನ್ನು ಈಗ ಕೆದಕುವುದು ಬೇಡ. ಇದನ್ನು ಗಣನೆಗೆ ತೆಗೆದುಕೊಳ್ಳುವುದಾದರೆ ನಾವು ಖುಜರಾಹೋ ಕಲಾಕೃತಿಗಳನ್ನು ಕೂಡ ಆಕ್ಷೇಪಿಸಬೇಕಾಗುತ್ತದೆ ಎಂದಿದ್ದಾರೆ. ಹಿಂದೂ ದೇವತೆಗಳನ್ನು ಅವಮಾನಗೊಳಿಸಿದ್ದಕ್ಕಾಗಿ ಭಾರತಾದ್ಯಂತ ಅವರು ವಿರುದ್ಧ ಸುಮಾರು 900 ಪ್ರಕರಣಗಳು ದಾಖಲಾಗಿವೆ. ಇತ್ತೀಚೆಗೆ ಹುಸೇನ್ ಕತಾರ್ ಪೌರತ್ವ ಪಡೆದುಕೊಂಡಿದ್ದಾರೆ.











Click it and Unblock the Notifications