ಯುಸೂಫ್ ಶಾಲಾ ಬಾಲಕ : ಬಾಲ ಬಿಚ್ಚಿದ ಸಿಮಂಡ್ಸ್
ಅಹ್ಮದಾಬಾದ್,
ಮಾ. 28 : ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಡೆಕ್ಕನ್ ಚಾರ್ಜರ್ಸ್ ಪರ ಆಡುತ್ತಿರುವ ಆಂಡ್ರ್ಯೂ ಸಿಮಂಡ್ ಮತ್ತು ವಿವಾದ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಶಿಸ್ತು ಮತ್ತು ತೆಗಳುವಿಕೆಯನ್ನು ಮೈಗೂಡಿಸಿಕೊಂಡಿರುವ ಸಿಮಂಡ್ಸ್, ಅಂತಾರಾಷ್ಟ್ರೀಯ ಕ್ರಿಕೆಟಿನಿಂದ ನಿವೃತ್ತಿ ಹೊಂದಿದ ನಂತರವೂ, ತಮ್ಮ ಹಳೆ ಚಟವನ್ನು ಬಿಟ್ಟಿಲ್ಲ. id="toptextpromo">ಮಾರ್ಚ್
26ರಂದು ರಾಜಸ್ತಾನ್ ರಾಯಲ್ಸ್ ತಂಡದಿಂದ ಸದೆಬಡಿಸಿಕೊಂಡ ಪಂದ್ಯದಲ್ಲಿ ರಾಯಲ್ಸ್ ತಂಡದ ಯುಸೂಫ್ ಪಠಾಣ್ ಅವರನ್ನು 'ಶಾಲಾ ಬಾಲಕ' ಎಂದು ಜರಿದಿದ್ದು ವಿವಾದಕ್ಕೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪಠಾಣ್, ತೆಗಳುವಿಕೆಯಿಂದ ತಲೆಕೆಡಿಸಿಕೊಳ್ಳಲಿಲ್ಲ. ಬದಲಿಗೆ, ತೆಗಳುವಿಕೆಯೇ ಉತ್ತಮವಾಗಿ ಆಡಲು ಪ್ರೇರಣೆಯಾಯಿತು ಎಂದು ಹೇಳಿದ್ದಾರೆ. ಈ ವಿವಾದದ ಬಗ್ಗೆ ಹೇಳಿಕೆ ನೀಡಿರುವ ಸಿಮಂಡ್ಸ್, ಹೌದು ನಾನಿರುವುದೇ ಹೀಗೆ ಎಂದು ಉಡಾಫೆಯಿಂದ ಮಾತನಾಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಆ
ಪಂದ್ಯದಲ್ಲಿ ಯುಸೂಫ್ ಪಠಾಣ್ ಕೇವಲ 34 ಚೆಂಡುಗಳಲ್ಲಿ 2 ಬೌಂಡರಿ ಮತ್ತು 8 ಸಿಕ್ಸರ್ ಗಳಿದ್ದ 74 ರನ್ ಸಿಡಿಸಿ ಜಯದ ರೂವಾರಿಯಾಗಿದ್ದರು. ಬ್ಯಾಟಿಂಗಿನಲ್ಲಿ ಯಶ ಕಾಣದ ಸಿಮಂಡ್ಸ್ ಬೌಲಿಂಗಿನಲ್ಲಿಯೂ ಯಾವುದೇ ಕೈಚಳಕ ತೋರಿರಲಿಲ್ಲ.











Click it and Unblock the Notifications