ಮೈಸೂರಿನಲ್ಲಿ ನೋಟು ಕಾಗದ ತಯಾರಿಕಾ ಘಟಕ
ಮೈಸೂರು,
ಮಾ.23: ನೋಟು ಮುದ್ರಣ ಕಾಗದವನ್ನು ದೇಶೀಯವಾಗಿ ತಯಾರಿಸಿಕೊಳ್ಳುವ ಮೂಲಕ ದೇಶದಲ್ಲಿ ನಕಲಿ ನೋಟಿನ ಹಾವಳಿಯನ್ನು ತಡೆಗಟ್ಟಲಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವ ಪ್ರಣಬ್ ಮುಖರ್ಜಿ ತಿಳಿಸಿದ್ದಾರೆ. ಇಲ್ಲಿನ ಮೇಟಗಳ್ಳಿಯಲ್ಲಿ ಬ್ಯಾಂಕ್ ನೋಟು ಕಾಗದ ತಯಾರಿಕಾ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಬಳಿಕ ಅವರು ಮಾತನಾಡುತ್ತಿದ್ದರು. id="toptextpromo">ನೋಟುಗಳ
ಮುದ್ರಣಕ್ಕೆ ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಪಡಿಸಬೇಕಿದೆ. ಈ ಹಿನ್ನೆಲೆಯಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ. ವರದಿ ಸಿದ್ಧವಾದ ಬಳಿಕ ಆರ್ ಬಿಐನೊಂದಿಗೆ ಚರ್ಚಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. id='are-slot-1' class='oiad oi-axt oiadv'> id='top-searched-articles'>ದೇಶದಲ್ಲಿ
ನಕಲಿ ನೋಟು ತಯಾರಿಸುವವರ ಹಾವಳಿ ಹೆಚ್ಚಾಗಿದೆ. ದೇಶದ ಆರ್ಥಿಕ ಸ್ಥಿತಿಗೆ ಇದರಿಂದ ಧಕ್ಕೆಯಾಗುತ್ತಿದೆ. ಆರ್ ಬಿಐ ಸ್ವತಃ ಕಾಗದ ತಯಾರಿಸಿಕೊಳ್ಳುವುದರಿಂದ ನಕಲಿ ನೋಟಿನ ಹಾವಳಿಗೆ ಕಡಿವಾಣ ಬೀಳಲಿದೆ ಎಂದು ಪ್ರಣಬ್ ತಿಳಿಸಿದರು.











Click it and Unblock the Notifications