ಹೆದ್ದಾರಿಯಲ್ಲಿ ಭೀಕರ ಅಪಘಾತ: ಡ್ರೈವರ್ ಪರಾರಿ
ಹಾಸನ,
ಮಾ.21:ಬೆಂಗಳೂರು- ಮಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 10 ಮಂದಿ ಮೃತ ಪಟ್ಟಿದ್ದು, 45 ಜನರು ಗಾಯಗೊಂಡಿದ್ದಾರೆ. ಮದುವೆಯ ಸಡಗರದಲ್ಲಿದ್ದ ಕುಟುಂಬವನ್ನು ಸೂತಕದ ಛಾಯೆಗೆ ಕೆಡವಿದ ಬಸ್ ಡ್ರೈವರ್ ರಂಗಸ್ವಾಮಿ ಪರಾರಿಯಾಗಿದ್ದಾನೆ. ಹಾಸನ ತಾಲೂಕು ಶಾಂತಿಗ್ರಾಮ ಬಳಿ ಶನಿವಾರ ರಾತ್ರಿ ಎಂಟರ ಸುಮಾರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಮತ್ತು ಮೆಟಡೋರ್ ಮುಖಾಮುಖಿ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. id="toptextpromo">ಮೆಟಡೋರ್
ಚಾಲಕ ಜಗದೀಶ (30) ವಧುವಿನ ತಂದೆ ಕುಂಟಯ್ಯ (45) ಸೋದರತ್ತೆ ಕಲ್ಯಾಣಿ (50) ಶಿವ(32) ಒಂಬತ್ತು ವರ್ಷದ ಬಾಲಕ, 8 ವರ್ಷದ ಬಾಲಕಿ, 3 ವರ್ಷದ ಮಗು ಸೇರಿದಂತೆ ಹತ್ತು ಮಂದಿ ಮೃತಪಟ್ಟಿದ್ದು, ಇವರೆಲ್ಲರೂ ಚನ್ನರಾಯಪಟ್ಟಣ ಮತ್ತು ಕೆ.ಆರ್.ಪೇಟೆ ತಾಲೂಕಿನವರು. ವಧುವಿನ ಸಹಿತ ಕುಟುಂಬದವರು ಚನ್ನರಾಯಪಟ್ಟಣದ ಸೋಮನಾಥನಹಳ್ಳಿ ಯಿಂದ ಹಾಸನಕ್ಕೆ ಭಾನುವಾರ ಮದುವೆ ನಡೆಯಬೇಕಿದ್ದ ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ವಧು
ಆಶಾಲತಾ (20) ಗೌರಮ್ಮ (32) ಬೇಲೂರಯ್ಯ(42) ಶಶಿಧರ (17) ದೇವರಾಜು(35) ಶಶಿಕಲಾ(17) ಋತು (5)ವಿಜಯಮ್ಮ (50) ಮರಿದ್ಯಾ ವಪ್ಪ(45) ಭಾಗ್ಯ(25) ಜಯಮ್ಮ(40) ಸೇರಿದಂತೆ ಸುಮಾರು 45 ಜನ ಗಾಯಗೊಂಡಿದ್ದು, ಗಾಯಾಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆನೀಡಲಾಗುತ್ತಿದ್ದು, ಐವರ ಸ್ಥಿತಿ ಗಂಭೀರವಾಗಿದೆ.











Click it and Unblock the Notifications