ವೀರಪ್ಪ ಮೊಯಿಲಿಗೆ ಮೂರ್ತಿದೇವಿ ಪ್ರಶಸ್ತಿ
ನವದೆಹಲಿ,
ಮಾ.18: ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯಿಲಿ ಅವರಿಗೆ ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ ಮೂರ್ತಿದೇವಿ ಪ್ರಶಸ್ತಿಯನ್ನು ಇಂದು (ಮಾ.18) ಪ್ರದಾನ ಮಾಡಲಾಗುತ್ತದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. id="toptextpromo">ಮೊಯಿಲಿ
ಅವರು ರಚಿಸಿರುವ 'ಶ್ರೀ ರಾಮಯಣ ಮಹಾನ್ವೇಷಣಂ' ಮಹಾಕಾವ್ಯಕ್ಕಾಗಿ ಈ ಪ್ರಶಸ್ತಿ ದೊರಕಿದೆ. ಕನ್ನಡದ ಪ್ರಮುಖ ಬರಗಾರರಾಗಿರುವ ಮೊಯಿಲಿ ಐದು ಸಂಪುಟಗಳಲ್ಲಿ ಶ್ರೀ ರಾಮಾಯಣ ಮಹಾನ್ವೇಷಣಂ ಮಾಹಾಕಾವ್ಯವನ್ನು ರಚಿಸಿದ್ದರು. id='are-slot-1' class='oiad oi-axt oiadv'> id='top-searched-articles'>ಸಾಹಿತ್ಯ
ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಮೊಯಿಲಿ ನಾಲ್ಕು ಕಾದಂಬರಿ, ಮೂರು ಕವನ ಸಂಗ್ರಹ, ಮೂರು ನಾಟಕಗಳನ್ನು ರಚಿಸಿದ್ದಾರೆ. 2007ರಲ್ಲಿ ಮೊಯಿಲಿ ಅವರಿಗೆ ಫಾದರ್ ಕಮಿಲ್ ಬುಲ್ಕೆ ರಾಮಾಯಣ ಅಂತಾರಾಷ್ಟ್ರೀಯ ಪ್ರಶಸ್ತಿಯೂ ಲಭಿಸಿತ್ತು.











Click it and Unblock the Notifications