ಸಾಲುಮರದ ನೆರಳಿನಲ್ಲೇ ಇರಬಯಸುವ ತಿಮ್ಮಕ್ಕ
ಮಾಗಡಿ, ಮಾ.12 : ಪತಿ ಬಿಕ್ಕಲುಚಿಕ್ಕಯ್ಯನೊಂದಿಗೆ ಸೇರಿ ಮಾಗಡಿ ತಾಲ್ಲೂಕ್ ಹುಲಿಕಲ್ ರಸ್ತೆಯ ಎರಡು ಬದಿಗಳಲ್ಲಿ ಸಾಲು ಮರಗಳನ್ನು ನೆಟ್ಟು ಪೋಷಿಸಿ ಹೆಮ್ಮರವಾಗಿಸಿರುವ ವೃಕ್ಷಮಿತ್ರ, ನಾಡೋಜ ಸಾಲುಮರದ ತಿಮ್ಮಕ್ಕ ಬದುಕಿನ ಮುಸ್ಸಂಜೆಯ ದಿನಗಳನ್ನ ಏಕಾಂಗಿಯಾಗಿ ಕಾಲಕಳೆಯುತ್ತಿದ್ದಾರೆ.
ಮಕ್ಕಳಿಲ್ಲದ ಸಾಲುಮರದ ತಿಮ್ಮಕ್ಕನಿಗೆ ಬದುಕಿಗೆ ಆಶ್ರಯವಾಗಲು ಈಗಾಗಲೇ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಲುಮರದ ತಿಮ್ಮಕ್ಕನಿಗೆ ಹಲವಾರು ಸೌಲಭ್ಯಗಳನ್ನ ನೀಡಿವೆ. ಪರಿಸರ ಪ್ರೇಮಿ ತಿಮ್ಮಕ್ಕನ ಮತ್ತಷ್ಟು ಆಶಯಗಳನ್ನು ಪೂರೈಸಲು ರಾಮನಗರ ಜಿಲ್ಲಾಡಳಿತ ಮುಂದಾಗಿದ್ದು ತಿಮ್ಮಕ್ಕನ ಮನೆಗೆ ಭೇಟಿ ನೀಡಿ ತಿಮ್ಮಕ್ಕನ ಆಶಯಗಳಿಗೆ ಸ್ಪಂದಿಸುವ ಭರವಸೆಯನ್ನು ನೀಡಿದೆ.
ಮಾಗಡಿ ತಾಲ್ಲೂಕಿನ ಕುದೂರು ಹೋಬಳಿಯ ಹುಲಿಕಲ್ಲು ಗ್ರಾಮದಲ್ಲಿರುವ ಸಾಲುಮರದ ತಿಮ್ಮಕ್ಕ ಪರಿಸರ ಪ್ರೇಮಿಯಾಗಿ ಹಲವಾರು ಪ್ರಮುಖ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. 80 ವರ್ಷದ ಸಾಲುಮರದ ತಿಮ್ಮಕ್ಕ ಹುಲಿಕಲ್ ಗ್ರಾಮದಲ್ಲೇ ಏಕಾಂಗಿಯಾಗಿ ಬದುಕು ಸಾಗಿಸುತ್ತಿದ್ದಾರೆ. ಸಾಲು ಮರದ ತಿಮ್ಮಕ್ಕ ಸಂಕಷ್ಟದಲ್ಲಿದ್ದಾರೆಂಬ ಸುದ್ದಿ ಹಬ್ಬಿದ್ದರ ಹಿನ್ನೆಲೆಯಲ್ಲಿ ತಕ್ಷಣವೇ ಜಿಲ್ಲಾಡಳಿತದ ಉಪವಿಭಾಗಾಧಿಕಾರಿ ನಾಗರಾಜ್, ತಹಸೀಲ್ದಾರ್ ಎಂ.ವಿ.ನಾಗರಾಜ್ ಮತ್ತು ಸಿಬ್ಬಂದಿಗಳು ತಿಮ್ಮಕ್ಕನ ಮನೆಗೆ ಭೇಟಿ ಕುಶಲೋಪರಿ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಲುಮರದ ತಿಮ್ಮಕ್ಕ, ಸರ್ಕಾರಗಳು ಮತ್ತು ಹಲವಾರು ಸಂಘಸಂಸ್ಥೆಗಳು ಹಲವು ಸೌಲಭ್ಯಗಳನ್ನು ಕಲ್ಪಿಸಿ ಬದುಕಿಗೆ ಆಸರೆ ನೀಡಿದ್ದಾರೆ. ಸರ್ಕಾರ ಕೂಡ ವೃದ್ದಾಪ್ಯವೇತನ, ಅಂತ್ಯೋದಯ ಪಡಿತರ ಕಾರ್ಡನ್ನು ನೀಡಿದ್ದಾರೆ. ಆಶ್ರಯ ಯೋಜನೆಯಡಿಯಲ್ಲಿ ಸರ್ಕಾರ ಮನೆ ನಿರ್ಮಾಣಕ್ಕೆ ಸಹಾಯ ಮಾಡಿದೆ ಎಂದು ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಹುಲಿಕಲ್ ಗ್ರಾಮದಲ್ಲಿ ತಿಮ್ಮಕ್ಕನ ಹೆಸರಿನಲ್ಲಿ ಒಂದು ಆಸ್ಪತ್ರೆ ನಿರ್ಮಿಸಬೇಕು ಮತ್ತು ಬದುಕಿನ ಬಂಡಿ ತಳ್ಳಲು ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ಸರ್ಕಾರ ನೀಡಬೇಕೆಂದು ತಿಮ್ಮಕ್ಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸರ್ಕಾರ ಕೂಡ ಹಲವಾರು ಸೌಲಭ್ಯಗಳನ್ನ ತಿಮ್ಮಕ್ಕನಿಗೆ ನೀಡಿದ್ದು, ವೃದ್ದಾಪ್ಯ ವೇತನ, ಅಂತ್ಯೋದಯ ಪಡಿತರ ಚೀಟಿ, ರಾಜ್ಯದಲ್ಲೆಡೆ ಪ್ರಯಾಣ ಮಾಡಲು ಉಚಿತ ಬಸ್‌ಪಾಸ್ ನೀಡಲಾಗಿದೆ, ಆಶ್ರಯ ಯೋಜನೆಯಲ್ಲಿ ತಿಮ್ಮಕ್ಕನ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯವನ್ನು ನೀಡಿದೆ. ಸರ್ಕಾರದ ವತಿಯಿಂದ ನಾಲ್ಕು ಎಕರೆ ಜಮೀನು ಕೂಡ ತಿಮ್ಮಕ್ಕನಿಗೆ ಮಂಜೂರಾಗಿದ್ದು ಪರಭಾರೆಯಾಗಿದೆ ಎಂದು ಜಿಲ್ಲಾ ಉಪವಿಭಾಗಾಧಿಕಾರಿ ನಾಗರಾಜ್ ತಿಳಿಸಿದರು. ತಿಮ್ಮಕ್ಕನ ಆಶಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆಂದು ನಾಗರಾಜ್ ತಿಳಿಸಿದರು.
ಸಾಲುಮರದ ತಿಮ್ಮಕ್ಕ ಮೊದಲಿನಿಂದಲೂ ಹಳ್ಳಿಯಲ್ಲೇ ಇದ್ದುಕೊಂಡು ಸರಳ ಜೀವನ ನಡೆಸಿಕೊಂಡು ಬರುತ್ತಿದ್ದಾರೆ. ತಿಮ್ಮಕ್ಕನನ್ನು ಸನ್ಮಾನ ಸತ್ಕಾರಕ್ಕೆ ಆಹ್ವಾನಿಸುವ ಸಂಘಸಂಸ್ಥೆಗಳು ಕೂಡ ತಿಮ್ಮಕ್ಕನಿಗೆ ಆರ್ಥಿಕ ಸಹಾಯವನ್ನು ಮಾಡುತ್ತಿವೆ. ಒಂಟಿ ಜೀವನ ನಡೆಸುತ್ತಿರುವ ತಿಮ್ಮಕ್ಕನನ್ನು ನೋಡಿಕೊಳ್ಳಲು ಹಲವು ಸಂಘ ಸಂಸ್ಥೆಗಳು ಮಂದೆ ಬಂದಿವೆ. ಆದರೆ ತಿಮ್ಮಜ್ಜಿ ಮಾತ್ರ ತಾನು ಮತ್ತು ತನ್ನ ಪತಿ ಬೆಳೆಸಿರುವ ಸಾಲುಮರಗಳನ್ನ ನೋಡುತ್ತಾ ನೆರಳಿನಲ್ಲೇ ವಿಹರಿಸುತ್ತಾ ಹುಲಿಕಲ್‌ನಲ್ಲೇ ಇರುತ್ತೇನೆಂಬುದು ತಿಮ್ಮಕ್ಕ ಆಶಯವನ್ನ ವ್ಯಕ್ತಪಡಿಸಿದರು.
-
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ












Click it and Unblock the Notifications